ಸಾವೊ ಪಾಲೊ: ಬ್ರೆಜಿಲ್‍ನ (Brazil) ಸುಪ್ರೀಂ ಕೋರ್ಟ್ (Supreme Court) ಎಲೋನ್ ಮಸ್ಕ್ (Elon Musk) ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣ ಎಕ್ಸ್‌ನ್ನು (X social network) ಅಮಾನತುಗೊಳಿಸುವಂತೆ ಆದೇಶಿಸಿದೆ. ಅದರಂತೆ ಬ್ರೆಜಿಲ್‍ನಲ್ಲಿ ಇಂದಿನಿಂದ ಸಾಮಾಜಿಕ ಜಾಲತಾಣ ಎಕ್ಸ್‌ನ್ನು ಸ್ಥಗಿತಗೊಳಿಸಲಾಗಿದೆ.
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ತಪ್ಪು ಮಾಹಿತಿಯ ಪ್ರಕರಣವನ್ನು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಲೆಕ್ಸಾಂಡ್ರೆ ಡಿ ಮೊರೇಸ್ ಶುಕ್ರವಾರ ಅಮಾನತುಗೊಳಿಸುವಂತೆ ಆದೇಶಿಸಿದ್ದರು. ತೀರ್ಪಿನ ವೇಳೆ ಕಂಪನಿಗೆ ಹೊಸ ಕಾನೂನು ಪ್ರತಿನಿಧಿಯನ್ನು ನೇಮಿಸುವ ಆದೇಶವನ್ನು ಅನುಸರಿಸಲು ಮಸ್ಕ್ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
Advertisement
ನ್ಯಾಯಾಲಯದ ಆದೇಶಕ್ಕೆ ಮಸ್ಕ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ನ್ಯಾ.ಮೊರೆಸ್ ಅವರನ್ನು `ದುಷ್ಟ ಸರ್ವಾಧಿಕಾರಿ’ ಎಂದು ಕರೆದಿದ್ದಾರೆ. ಅಲ್ಲದೇ ಬ್ರೆಜಿಲ್‍ನಲ್ಲಿ ಪ್ರಜಾಪ್ರಭುತ್ವವನ್ನು ನಾಶಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿಯಾಗಿದೆ. ಬ್ರೆಜಿಲ್‍ನಲ್ಲಿ ಹುಸಿ ನ್ಯಾಯಾಧೀಶರು ರಾಜಕೀಯ ಉದ್ದೇಶಗಳಿಗಾಗಿ ಅದನ್ನು ನಾಶಪಡಿಸುತ್ತಿದ್ದಾರೆ ಎಂದು ಮಸ್ಕ್ ಕಟುವಾಗಿ ಟೀಕಿಸಿದ್ದಾರೆ.
Advertisement
ನ್ಯಾಯಾಲಯ ಕೆಲ ವ್ಯಕ್ತಿಗಳ ಖಾತೆಯನ್ನು ಸೆನ್ಸಾರ್ಶಿಪ್ ಮಾಡುವಂತೆ ಆದೇಶಿಸಿತ್ತು. ಆದರೆ ಎಕ್ಸ್ ಸೆನ್ಸಾರ್ ಮಾಡಿರಲಿಲ್ಲ. ಈ ಪ್ರಕರಣ ಸುಪ್ರೀಂ ಮೆಟ್ಟಿಲೇರಿದ ಬೆನ್ನಲ್ಲೇ ನ್ಯಾ.ಮೊರೆಸ್ ಅವರು ಕಂಪನಿಯ ಹಿಂದಿನ ಕಾನೂನು ಪ್ರತಿನಿಧಿಯನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಸ್ಕ್ ಆರೋಪಿಸಿದ್ದಾರೆ.
ಬುಧವಾರ ನ್ಯಾಯಾಲಯ ಮಸ್ಕ್‌ಗೆ ಹೊಸ ಪ್ರತಿನಿಧಿಯನ್ನು ಹುಡುಕಲು 24 ಗಂಟೆಗಳ ಕಾಲಾವಕಾಶ ನೀಡಿತ್ತು. ಆದರೆ ಈ ಅವಧಿಯಲ್ಲಿ ಎಕ್ಸ್ ಪ್ರತಿನಿಧಿಯನ್ನು ಹುಡುಕದ ಕಾರಣ ಎಕ್ಸ್ ಅನ್ನು ಸ್ಥಗಿತಗೊಳಿಸಲು ಆದೇಶಿಸಿದೆ.
ಗಡುವು ಮುಗಿದ ಸ್ವಲ್ಪ ಸಮಯದ ಬಳಿಕ ಎಕ್ಸ್ ಸಂಸ್ಥೆ `ರಾಜಕೀಯ ವಿರೋಧಿಗಳನ್ನು ಸೆನ್ಸಾರ್ ಮಾಡಲು ನಾವು ಅವರ ಕಾನೂನುಬಾಹಿರ ಆದೇಶಗಳನ್ನು ಅನುಸರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಏನಿದು ಮಸ್ಕ್ – ಬ್ರೆಜಿಲ್ ಘರ್ಷಣೆ?
ಬ್ರೆಜಿಲ್‍ನ ಮಾಜಿ ಬಲಪಂಥೀಯ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರಿಗೆ ಸೇರಿದ ಹಲವಾರು ಎಕ್ಸ್ ಖಾತೆಗಳನ್ನು ಅಮಾನತುಗೊಳಿಸುವಂತೆ ಮೊರೆಸ್ ಆದೇಶಿಸಿದ್ದರು. ಇದಾದ ಬಳಿಕ ಮಸ್ಕ್ ಮತ್ತು ಬ್ರೆಜಿಲ್ ಬಿಕ್ಕಟ್ಟು ಪ್ರಾರಂಭವಾಯಿತು.
ಹಾಲಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಜನವರಿ 2023 ರಲ್ಲಿ ಅಧಿಕಾರ ವಹಿಸಿಕೊಳ್ಳುವುದನ್ನು ತಡೆಯಲು ಬೋಲ್ಸನಾರೊ ಎಕ್ಸ್ ಖಾತೆಗಳನ್ನು ಬಳಸಿ ದಂಗೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬ್ರೆಜಿಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯು ಬ್ರೆಜಿಲ್‍ನಲ್ಲಿ 2.20 ಲಕ್ಕೂಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.