ದುಬೈ: ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್ ಹಂತದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಇದರಿಂದಾಗಿ ರೊಚ್ಚಿಗೆದ್ದ ಅಭಿಮಾನಿಗಳು #BoycottIPL ಅಭಿಯಾನ ಆರಂಭಿಸಿದ್ದಾರೆ.
Advertisement
ಇದೀಗ #BoycottIPL ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಟೀಂ ಇಂಡಿಯಾ (Team India) ಆಟಗಾರರು ಐಪಿಎಲ್‍ನಲ್ಲಿ (IPL) ತೋರ್ಪಡಿಸುವ ಆಟದ ವೈಕರಿ ರಾಷ್ಟ್ರೀಯ ತಂಡದ ಪರ ಕಾಣುತ್ತಿಲ್ಲ. ಐಪಿಎಲ್‍ನಲ್ಲಿ ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಮಿಂಚುವ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಕಳಪೆ ಆಟದ ಮೂಲಕ ತಂಡದ ಸೋಲಿಗೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಐಪಿಎಲ್‍ನ್ನು ಬಾಯ್‍ಕಾಟ್ (BoycottIPL) ಮಾಡಿ ಎಂದು ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ಭಾರತದ ಖೇಲ್ ಖತಂ: ಏಷ್ಯಾ ಕಪ್‌ನಿಂದ ಬಹುತೇಕ ಔಟ್
Advertisement
Advertisement
ನಿನ್ನೆ ಶ್ರೀಲಂಕಾ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಸೋತು ಮುಖಭಂಗ ಅನುಭವಿಸಿದೆ. ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ, 174 ರನ್‍ಗಳ ಗುರಿ ನೀಡಿತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್‍ಗಳಿಸಿ ರೋಚಕ ಜಯ ಸಾಧಿಸಿ ಫೈನಲ್ ಟಿಕೆಟ್ ಖಾತ್ರಿ ಪಡಿಸಿಕೊಂಡಿದೆ. ಈ ಸೋಲಿನೊಂದಿಗೆ ಭಾರತದ ಏಷ್ಯಾಕಪ್ ಫೈನಲ್ ಹಾದಿ ಬಹುತೇಕ ಮುಚ್ಚಿಕೊಂಡಿದೆ. ಹಾಗಾಗಿ ಅಭಿಮಾನಿಗಳು ಟೀಂ ಇಂಡಿಯಾದ ಆಟಗಾರರ ಪ್ರದರ್ಶನದ ಕುರಿತಾಗಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ
Advertisement
I simply cannot understand what the hell is wrong with our players.
They don't have enough fighting spirit. Their body language is lousy and not intimidating
Even after humiliating performance,defeat against Pakistan they are smiling & laughing shamelessly.
PATHETIC!#BoycottIPL
— Om_the_unstoppable (@LumbhaniOm) September 7, 2022
ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿ ಮಹತ್ವದ ಟೂರ್ನಿಗಳಲ್ಲಿ ಭಾರತ ನಿರಾಸೆ ಅನುಭವಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್ ಎಂದು ಕಿಡಿಕಾರುತ್ತಿದ್ದಾರೆ. ಒಂದು ಕಡೆ ಐಪಿಎಲ್ ಕುರಿತಾಗಿ ಟೀಕೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಐಪಿಎಲ್‍ನಿಂದಾಗಿ ಅದೆಷ್ಟೋ ಯುವ ಆಟಗಾರರು ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಒಂದು ಕಡೆ ಐಪಿಎಲ್‍ನಿಂದಾಗಿ ಲಾಭವಾದರೆ, ಇನ್ನೊಂದು ಕಡೆ ನಷ್ಟವೂ ಆಗುತ್ತಿದೆ. ಹಾಗಾಗಿ ಐಪಿಎಲ್ ಕುರಿತಾಗಿ ಇದೀಗ ಚರ್ಚೆ ಜೋರಾಗಿದೆ.
Its time to say #Goodbye to IPL. Bcoz of IPL players like Bhuvi Chahal KL Rahul and #RishabhPant are not focusing on international cricket.#BCCI and Coach Dravid take note of this and include match winners Shami Ashwin in T20 World Cup#IndianCricketTeam #INDvSL #BoycottIPL pic.twitter.com/IoS49bVs4y
— Raghav Dilbar (@DilbarRaghav) September 7, 2022