ಮುಂಬೈ: ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ಭಾರತ, ಪಾಕಿಸ್ತಾನದ ಎದುರು ಸೋಲನ್ನು ಅನುಭವಿಸಿತು.
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ 10 ಓವರ್‌ಗಳವರೆಗೂ ಉತ್ತಮ ರನ್‌ಗಳನ್ನೇ ಕಲೆಹಾಕಿತ್ತು. 9.4 ಓವರ್‌ಗಳಿದ್ದಾಗ ತಂಡದ ಮೊತ್ತ 3 ವಿಕೆಟ್‌ಗೆ 91 ರನ್‌ಗಳಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಷಭ್ ಪಂತ್ 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ ಕೇವಲ 14 ರನ್ ಗಳಿಸಿದರು. ರಿವರ್ಸ್ ಸ್ವೀಪ್ ಶಾಟ್ ಮೂಲಕ ಮತ್ತೊಂದು ಬೌಂಡರಿ ಎತ್ತುವ ಪ್ರಯತ್ನ ಮಾಡಿದ ಪಂತ್ ಎದುರಾಳಿ ತಂಡದ ಆಸಿಫ್ ಅಲಿ ಕೈಗೆ ಸುಲಭ ಕ್ಯಾಚ್ ನೀಡಿದರು. ಇದನ್ನೂ ಓದಿ: ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ
Advertisement
Advertisement
ನಂತರದಲ್ಲಿ ಬಂದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಟೀಂ ಇಂಡಿಯಾ 7 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.5 ಓವರ್‌ಗಳಲ್ಲಿ 182 ರನ್ ಗಳಿಸಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿತು.
Advertisement
ಸೂಪರ್ ಲೀಗ್‌ನಲ್ಲಿ ರಿಷಭ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಕೂಡ ಗಂಭೀರ್ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ
Advertisement
`ಸೂಪರ್ ಫೋರ್ ಲೀಗ್‌ನ ಆ ಹಂತದಲ್ಲಿ ಪಂತ್ ಅಂತಹ ಶಾಟ್ ಆಡುವ ಅಗತ್ಯವಿರಲಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವೀಪ್ ಆಡುತ್ತಾರೆ ಎಂಬುದು ನನಗೆ ತಿಳಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಗ್ರ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಎಂಬುದೂ ಗೊತ್ತಿದೆ. ಆದರೆ ಈ ಹಂತದಲ್ಲಿ ಆ ಹೊಡೆತ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ರಿವರ್ಸ್ ಸ್ವೀಪ್ ಹೊಡೆಯುವುದು ಪಂತ್ ಅವರ ಶಾಟ್ ಅಲ್ಲ. ಲಾಂಗ್ ಆನ್ ಅಥವಾ ಡೀಪ್ ಮಿಡ್‌ವಿಕೆಟ್ ಅವರ ಪಕ್ಕಾ ಶಾಟ್. ಅದೇ ಅವರ ಶಕ್ತಿ. ಆ ಸಂದರ್ಭದಲ್ಲಿ ರಿವರ್ಸ್ ಸ್ವೀಪ್ ಅಗತ್ಯವಿರಲಿಲ್ಲ. ಅದು ಅವರ ಶಕ್ತಿಯೂ ಅಲ್ಲ ಎಂದು ಗಂಭೀರ್ ಅಸಮಾಧಾನ ಹೊರಹಾಕಿದ್ದಾರೆ.