ಭೋಪಾಲ್: ವ್ಯಕ್ತಿಗಳಿಬ್ಬರು ಬಾಲಕನ ಕೈಗಳನ್ನು ಹಗ್ಗದಿಂದ ಬಿಗಿದು ಪಕ್ಕದ ಮರಕ್ಕೆ ಕಟ್ಟಿ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದೀಗ ಆರೋಪಿ ರಾಕೇಶ್ ಜೈನ್ (Rakesh Jain) ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) (Prevention of Atrocities) ಕಾಯ್ದೆಯಡಿ ಬಾಲಕನನ್ನು ಥಳಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ವರ್ಷವಿದ್ದಾಗ ಮದುವೆ – 21 ವರ್ಷದ ಬಳಿಕ ಯುವತಿಯ ಮದುವೆ ರದ್ದು
Advertisement
Advertisement
ಮಧ್ಯಪ್ರದೇಶದ (Madhya Pradesh) ಸಾಗರ್‌ನಲ್ಲಿರುವ ಸಿದ್ಧಾಯತನ ಜೈನ ದೇವಾಲಯದಲ್ಲಿ (Siddhayatan Jain Temple) ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಬಾಲಕನನ್ನು ಮರಕ್ಕೆ ಕಟ್ಟಿಹಾಕಿದಾಗ ಆತ ಸಹಾಯಕ್ಕಾಗಿ ಕಿರುಚಾಡುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ. ಈ ವೇಳೆ ಬಾಲಕನನ್ನು ಬಿಡಿಸಲು ಬಂದ ಇಬ್ಬರು ವ್ಯಕ್ತಿಗಳನ್ನು ಕೂಡ ಬೈದು ಓಡಿಸಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಮೋತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕ್ಯಾಮೆರಾವನ್ನು ಲೆಕ್ಕಿಸದೇ ಕಿತ್ತಾಡಿದ ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಸತೀಶ್ ಸಿಂಗ್ ಅವರು, ಬಾಲಕನ ಕುಟುಂಬಸ್ಥರು ಬಂದು ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ರಾಕೇಶ್ ವಿರುದ್ಧ ಎಸ್‍ಸಿ/ಎಸ್‍ಟಿ (Scheduled Caste and Scheduled Tribe) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ರಾಕೇಶ್ ಬಾಲಕನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದನು ಎಂದು ಬಾಲಕನ ಕುಟುಂಬಸ್ಥರು ತಿಳಿಸಿದ್ದಾರೆ. ರಾಕೇಶ್ ಜೈನ್ ಬಾಲಕನನ್ನು ಥಳಿಸುವಾಗ ಮಗು ಗೇಟ್ ಬಳಿ ನಿಂತಿತ್ತು. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.