ಆಟವಾಡಲು ಹೋದ ಬಾಲಕ ನಾಪತ್ತೆ – ಮಗನಿಗಾಗಿ ಬೀದಿ ಬೀದಿ ಅಲೆಯುತ್ತಿರುವ ಪೋಷಕರು

Public TV
1 Min Read
MISSING copy

ಗದಗ: ಶಾಲೆ ಮುಗಿಸಿಕೊಂಡು ಆಟವಾಡಲು ಹೋದ ಬಾಲಕ ನಾಪತ್ತೆಯಾದ (Missing) ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

ನಗರದ ಹೊಂಬಳ ನಾಕಾ ಬಳಿ ಜನತಾ ಜಾಲೋನಿಯ ಬಾಲಕ ಅಫ್ಜಲ್ ಮೌಲಾಸಾಬ್ ದಾವಲಖಾನವರ್ (9) ನಾಪತ್ತೆಯಾಗಿದ್ದಾನೆ. ಮೌಲಾಸಾಬ್ ಹಾಗೂ ಖಾಜಾಬಿ ದಂಪತಿಯ ಏಕೈಕ ಪುತ್ರನಾಗಿದ್ದ ಈತ 3ನೇ ತರಗತಿ ಓದುತ್ತಿದ್ದ. ಮಂಗಳವಾರ ಶಾಲೆ ಮುಗಿಸಿಕೊಂಡು ಸಂಜೆ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಬ್ಯಾಗ್ ಇಟ್ಟು ಮಾವಿನ ಹಣ್ಣು ತೆಗೆದುಕೊಂಡು ಆಟವಾಡಲು ಹೋದಾತ ಮತ್ತೆ ಮನೆಗೆ ಹಿಂತಿರುಗಿಲ್ಲ. ಇದನ್ನೂ ಓದಿ: ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

ಕುಟುಂಬಸ್ಥರು ಮಂಗಳವಾರ ರಾತ್ರಿಯಿಂದ ಅನೇಕ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಮಗುವಿನ ಫೋಟೋ ಹಿಡಿದುಕೊಂಡು ಆತನ ಪೋಷಕರು ಕಣ್ಣೀರಿಡುತ್ತಾ ಬೀದಿ ಬೀದಿ ಅಲೆಯುತ್ತಿದ್ದಾರೆ. ಒಬ್ಬನೇ ಗಂಡು ಮಗ ದಯವಿಟ್ಟು ಹುಡುಕಿಕೊಡಿ ಎಂದು ಅಂಗಲಾಚುತ್ತಾ, ಕಣ್ಣೀರಿಡುತ್ತಾ ಅಲೆಯುತ್ತಿದ್ದಾರೆ. ಬಾಲಕನ ನಾಪತ್ತೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ- ತಪ್ಪಿದ ಭಾರೀ ಅನಾಹುತ

ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ (Shahara Police Station) ದೂರು ದಾಖಲಾಗಿದೆ. ಅನೇಕ ಕಡೆಗಳಲ್ಲಿ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಹುಡುಕುತ್ತಿದ್ದಾರೆ. ನಿನಗಾಗಿ ಕುಟುಂಬ ಕಾಯುತ್ತಿದೆ, ಬೇಗ ಬಾ ಮಗ ಎಂದು ಕುಟುಂಬಸ್ಥರು ಹಂಬಲಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಗಂಡನಿಗೇ ಸ್ಕೆಚ್‌ ಹಾಕಿ ಮುಗಿಸಿದ್ಲು ಕೋಲಾರದ ಖತರ್ನಾಕ್ ಲೇಡಿ

Share This Article