ಬೀದರ್: ಬಸ್ ಚಲಾಯಿಸುತ್ತಿರುವಾಗಲೇ ಚಾಲಕ ಹೃದಯಾಘಾತ (Bus Driver Heart Attack) ದಿಂದ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿ ನಡೆದಿದೆ.
ಮುರಿಗೆಪ್ಪ ಅಥಣಿ ಹೃದಯಾಘಾತದಿಂದ ಸಾವನ್ನಪ್ಪಿದ ಡ್ರೈವರ್. ಕಂಡೆಕ್ಟರ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
Advertisement
Advertisement
ಬಸ್ ಕಲಬುರಗಿಯ ಜಿ. ಅಪ್ಜಲಪುರದಿಂದ ವಿಜಯಪುರ (Vijayapura) ಕಡೆಗೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಹೆಡ್ ಲೈಟ್ ಸಮಸ್ಯೆಯಿಂದ ಪ್ರಯಾಣಿಕರನ್ನ ಕೆಳಗೆ ಇಳಿಸಿ, ಸಿಂದಗಿ ಡಿಪೋಗೆ ಬಸ್ ತೆಗೆದುಕೊಂಡು ಹೊರಟಿದ್ದರು. ಆಗ ದಾರಿ ಮಧ್ಯೆ ಡ್ರೈವರ್ ಮುರಿಗೆಪ್ಪ ಅಥಣಿಗೆ ಹೃದಯಾಘಾತವಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
Advertisement
ಆಗ ಪೆಟ್ರೋಲ್ ಬಂಕ್ ನುಗ್ಗುತ್ತಿದ್ದ ಬಸ್ಸಿನ ಬ್ರೇಕ್ ಹಿಡಿದು ನಿರ್ವಾಹಕ ಶರಣು ಟಾಕಳಿ ನಿಲ್ಲಿಸಿದ್ದರು. ಯಾವ ರೀತಿ ಅಪಘಾತ ತಪ್ಪಿತು ಅನ್ನೋ ದೃಶ್ಯಗಳು ಪೆಟ್ರೋಲ್ ಬಂಕ್ ನ ಸಿಸಿಟಿವಿಯಲ್ಲಿ ಸೆರೆ ಆಗಿವೆ. ಇದನ್ನೂ ಓದಿ: ತಂದೆಗೆ ರಾತ್ರಿ ಊಟ ಕೊಡಲು ಜಮೀನಿಗೆ ಹೋಗುತ್ತಿದ್ದಾಗ ಹಾವು ಕಡಿದು ಬಾಲಕ ಸಾವು
Advertisement