ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಎರಡೂವರೆ ವರ್ಷದ ಗಂಡು ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ.
ಮೃತ ಮಗುವನ್ನು ಲೇಖನ್ ಎಂದು ಗುರುತಿಸಲಾಗಿದ್ದು, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಲೇಖನ್ ತಂದೆ ಗೋವಿಂದರಾಜು ಹಾಗೂ ತಾಯಿ ಗಾಯತ್ರಿ ಆರೋಪಿಸಿದ್ದಾರೆ. ಇದನ್ನೂ ಓದಿ: 68 ಸಾವಿರ ಒತ್ತುವರಿ ತೆರವು, 844 ಕೋಟಿ ಮೌಲ್ಯ ಆಸ್ತಿ ಜಪ್ತಿ, 1.2 ಲಕ್ಷ ಲೌಡ್ ಸ್ಪೀಕರ್ ತೆರವು – 100 ದಿನದ ಸಾಧನೆ ಎಂದ ಯೋಗಿ
Advertisement
Advertisement
ಜ್ವರ ಹಿನ್ನೆಲೆ ಲೇಖನ್ ಅನ್ನು ನೆಲಮಂಗಲದ ಆಸರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚೇರಿಸಿಕೊಳ್ಳುತ್ತದ್ದ ಲೇಖನ್ ಏಕಾಏಕಿ ಸಂಪೂರ್ಣವಾಗಿ ಅಸ್ವಸ್ಥನಾಗಿದ್ದಾನೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸುವ ವೇಳೆ ಮಗು ಸಾವನ್ನಪ್ಪಿದೆ. ಮಗುವಿಗೆ ಚಿಕಿತ್ಸೆ ನೀಡಲು ವೈದ್ಯರು ತಡ ಮಾಡಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆಸರೆ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಇದೀಗ ಮಗುವಿನ ಶವವನ್ನು ನೆಲಮಂಗಲ ಟೌನ್ ಪೊಲೀಸ್ ಠಾಣೆ ಬಳಿ ತಂದು ಪೋಷಕರು ನ್ಯಾಯದ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ನಿನ್ನ ಹೆಂಡತಿಯನ್ನು ಕಂಟ್ರೋಲ್ ಮಾಡೋಕೆ ಆಗೋಲ್ಲ ಅಂದ್ರೆ ಓಡಿ ಹೋಗ್ತಾಳೆ – ಠಾಕ್ರೆಗೆ ಈಶ್ವರಪ್ಪ ಟಾಂಗ್