ವಿಜಯಪುರ: ಜಿಲ್ಲೆಯಲ್ಲಿ ಚಾಕಲೇಟ್ ಕದ್ದಿದ್ದಕ್ಕೆ ಬಾಲಕನಿಗೆ ಥಳಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯಪುರ (Vijayapura) ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಚಾಕಲೇಟ್ ಕದಿದ್ದಕ್ಕೆ ಅಂಗಡಿಯ ಮಾಲೀಕ ಅಶೋಕ್ ಪತ್ತಾರ ಎಂಬಾತ ಬಾಲಕನಿಗೆ ಥಳಿಸಿದ್ದ. ಇದರ ಬೆನ್ನಲ್ಲೇ ಬಾಲಕನ ತಂದೆ ರೆಹಮಾನ್ ವಾಲೀಕಾರ್ ಎಂಬುವವರು ದೂರು ನೀಡಿದ್ದರು. ಇದನ್ನೂ ಓದಿ: ಧಾರ್ಮಿಕ ಆಚರಣೆಗೆ ಜಾತಿ ಬಣ್ಣ – ರಾಹುಲ್ ವಿರುದ್ಧ SC/ST ಕಾಯ್ದೆ ಅಡಿ ಕೇಸ್ ದಾಖಲು
ದೂರಿನನ್ವಯ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿ ಅಶೋಕ್‌ನನ್ನು ಬಂಧಿಸಿದ್ದಾರೆ.
