ಹಿಂದಿ ರಾಷ್ಟ್ರ ಭಾಷೆ ಅಂತ ಒಪ್ಪಿಕೊಳ್ಳದಿದ್ದರೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡಬೇಡಿ ಎಂದು ನಿನ್ನೆಯಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಹೇಳಿದ್ದರು. ಈ ಹೇಳಿಕೆಗೆ ಕಾರಣ ಸುದೀಪ್ ಅವರು ಆಡಿದ ಮಾತುಗಳಾಗಿತ್ತು. ಆದರೆ, ಅದರ ಹಿಂದೆ ಬೇರೆಯೇ ಕಾರಣವಿದೆ ಎಂದಿದ್ದಾರೆ ಬಾಲಿವುಡ್ ನ ಇಬ್ಬರು ಸ್ಟಾರ್ ನಟರು. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಿಯಲ್ ಹೀರೋ ಸೋನು ಸೂದ್, ‘ಸಿನಿಮಾಗಳಿಗೆ ಯಾವುದೇ ಭಾಷೆಯಿಲ್ಲ. ರಂಜಿಸುವುದಷ್ಟೇ ಅದರ ಭಾಷೆ. ಸಿನಿಮಾಗಳ ವಿಷಯದಲ್ಲಿ ಭಾಷೆಯನ್ನು ಎಳೆದು ತರಬಾರದು. ನಾವೆಲ್ಲರೂ ಒಂದೇ ಎಂದು ರಂಜಿಸಬೇಕು’ ಎಂದು ಅಜಯ್ ದೇವಗನ್ ಗೆ ಕಿವಿ ಹಿಂಡುವಂತೆ ಹೇಳಿಕೆ ಕೊಟ್ಟಿದ್ದಾರೆ. ಕಲಾವಿದರು ಯಾವುದೇ ಕಾರಣಕ್ಕೂ ಈ ರೀತಿ ಕಿತ್ತಾಟ ಮಾಡಬಾರದು ಎಂದು ಸಲಹೆ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್
Advertisement
Advertisement
ಫ್ಯಾಮಿಲಿ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಮನೋಜ್ ಬಾಜಪೇಯಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣದವರ ಸಿನಿಮಾಗಳ ಹಿಂದಿಯಲ್ಲಿ ಗೆಲ್ಲುತ್ತಿವೆ. ನೂರಾರು ಕೋಟಿ ವ್ಯವಹಾರ ಮಾಡಲಾಗುತ್ತಿದೆ. ಹಾಗಾಗಿ ಭಾಷೆಯನ್ನು ಮುಂದಿಟ್ಟುಕೊಂಡು ವಾತಾವರಣವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಬಾಲಿವುಡ್ ನಟರು ಎಂದು ಪರೋಕ್ಷವಾಗಿ ಅಜಯ್ ದೇವಗನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್
Advertisement
ಅಲ್ಲದೇ, ಹಿಂದಿ ರಾಷ್ಟ್ರ ಭಾಷೆಯ ವಿಚಾರ ಸಿನಿಮಾಗಳಿಗೆ ಸಂಬಂಧಿಸಿದ್ದಲ್ಲ. ಅದನ್ನು ಕಲಾವಿದರು ಈ ರೀತಿಯಲ್ಲಿ ಎಳೆದಾಡುವುದು ಸರಿಯಾದದ್ದು ಅಲ್ಲ. ಮನರಂಜನೆಯ ಇಂಡಸ್ಟ್ರಿ ಒಂದೇ ಎಂದು ಎಲ್ಲರೂ ಕೆಲಸ ಮಾಡಬೇಕು ಎಂದು ಕೆಲವರು ಸಲಹೆ ಕೊಟ್ಟಿದ್ದಾರೆ. ಈ ಚರ್ಚೆ ಈಗ ಕೇವಲ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಮಾತ್ರ ಉಳಿದುಕೊಂಡಿಲ್ಲ, ರಾಜಕಾರಣಿಗಳು ಮತ್ತು ಕನ್ನಡ ಪರ ಹೋರಾಟಗಾರರು ಕೂಡ ಅಜಯ್ ದೇವಗನ್ ವಿರುದ್ಧ ಕಿಡಿಕಾರಿದ್ದಾರೆ.