ಶಿಮ್ಲಾ: ಮದುವೆಗೆ ಬಾಸ್ ರಜೆ ಕೊಡದ ಕಾರಣ ವರ ಹಾಗೂ ವಧು ವಿಡಿಯೋ ಕಾಲ್‌ನಲ್ಲಿ ವಿವಾಹವಾಗಿರುವ ಸಂಗತಿಯೊಂದು ನಡೆದಿದೆ.
ಭಾರತೀಯ ಮೂಲದ ವ್ಯಕ್ತಿ ಟರ್ಕಿಯಲ್ಲಿದ್ದರು (Turkey). ಆತನ ಮದುವೆಗಾಗಿ ಬಾಸ್ ರಜೆ ಕೊಡದ ಕಾರಣ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ (Mandi) ವಧುವಿನೊಂದಿಗೆ ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದಾರೆ.
Advertisement
ವಧುವಿನ ಅಜ್ಜನಿಗೆ ಅನಾರೋಗ್ಯದ ಹಿನ್ನೆಲೆ ವರನನ್ನು ಬೇಗ ಮದುವೆಯಾಗು ಎಂದು ವಧುವಿನ ಕುಟುಂಬಸ್ಥರು ಒತ್ತಾಯಿಸಿದ್ದರು. ಈ ಕಾರಣದಿಂದ ವರ ಮದುವೆಗಾಗಿ ಬಾಸ್ ಬಳಿ ರಜೆ ಕೋರಿದ್ದರು. ಆದರೆ ಬಾಸ್ ರಜೆಯನ್ನು ನಿರಾಕರಿಸಿದ್ದರು. ಇದರಿಂದ ಈ ವಿಷಯವನ್ನು ತಿಳಿದ ಕುಟುಂಬಸ್ಥರು ವರ್ಚುವಲ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಬಿಷ್ಣೋಯ್ ಗ್ಯಾಂಗ್‌ನಿಂದ 5 ಕೋಟಿಗೆ ಬೇಡಿಕೆ
Advertisement
Advertisement
ಬಿಲಾಸ್‌ಪುರದ ನಿವಾಸಿಯಾಗಿರುವ ವರ ಅದ್ನಾನ್ ಮುಹಮ್ಮದ್ ಅವರ ಕುಟುಂಬವು ಭಾನುವಾರ ಮಂಡಿಗೆ ತಲುಪಿದರು. ಬಳಿಕ ಸೋಮವಾರ ವಿಡಿಯೋ ಕರೆಯ ಮೂಲಕ ವಿವಾಹವಾಗಿದ್ದು, ಖಾಜಿಯೊಬ್ಬರು ಕುಬೂಲ್ ಹೈ ಎಂದಾಗ ಮೂರು ಬಾರಿ ಹೇಳುವ ಮೂಲಕ ಧಾರ್ಮಿಕ ಕ್ರಿಯೆಗಳು ನೆರವೇರಿದವು.
Advertisement
ಈ ಕುರಿತು ಮಾತನಾಡಿದ ವಧುವಿನ ಚಿಕ್ಕಪ್ಪ ಅಕ್ರಂ ಮೊಹಮ್ಮದ್, ಅತ್ಯಾಧುನಿಕ ತಂತ್ರಜ್ಞಾನದಿAದ ಮದುವೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ, ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಭೂಕುಸಿತ ಮತ್ತು ಪ್ರವಾಹದಿಂದಾಗಿ ವರನ ಮನೆಯವರು ವಧುವಿನ ಮನೆಗೆ ತಲುಪದ ಕಾರಣ ಶಿಮ್ಲಾದ ಕೋಟ್‌ಗಢ್‌ನ ಆಶಿಶ್ ಸಿಂಘಾ ಹಾಗೂ ಕುಲುವಿನ ಭುಂತರ್‌ನಲ್ಲಿದ್ದ ಶಿವಾನಿ ಠಾಕೂರ್ ಅವರನ್ನು ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದರು.ಇದನ್ನೂ ಓದಿ: ಕೊತ್ವಾಲ್ ಬಳಿ 100 ರೂ.ಗೆ ಕೆಲಸ ಮಾಡ್ತಿದ್ದ ಡಿಕೆ ಕಣ್ಣೀರು ಹಾಕಿರೋದು ನೋಡಿದ್ದೀರಾ? – ಹೆಚ್‌ಡಿಡಿ