ಲಂಡನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸುವುದನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮೊಸಳೆಯೊಂದಿಗಿನ ಮಾತುಕತೆಗೆ ಹೋಲಿಸಿದ್ದಾರೆ. ಈ ಮೂಲಕ ಜಾನ್ಸನ್ ಉಕ್ರೇನ್ ಕುರಿತು ಯಾವುದೇ ಶಾಂತಿಯುತ ಮಾತುಕತೆ ವಿಫಲವಾಗುವ ಸಾಧ್ಯತೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಮೊಸಳೆಯ ಬಾಯಲ್ಲಿ ನಿಮ್ಮ ಕಾಲಿರುವಾಗ ಅದರೊಂದಿಗೆ ಮಾತನಾಡಿ ಬಿಡಿಸಿಕೊಳ್ಳಲು ಹೇಗೆ ಸಾಧ್ಯ? ಅದೇ ರೀತಿ ಉಕ್ರೇನಿಯನ್ನರು ದಾಳಿಯನ್ನು ಎದುರಿಸುತ್ತಿರುವಾಗ ರಷ್ಯಾದೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಸಾಧ್ಯವಿದೆಯೇ ಎಂದಿದ್ದಾರೆ. ಇದನ್ನೂ ಓದಿ: ಭೂಮಿಯ ಯಾವುದೇ ಭಾಗ ತಲುಪಬಲ್ಲ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷಿಸಿದ ರಷ್ಯಾ
Advertisement
Advertisement
ಪುಟಿನ್ ಬಗ್ಗೆ ಎಲ್ಲರಿಗೂ ನಂಬಿಕೆಯ ಕೊರತೆ ಇದೆ. ಆದರೂ ಉಕ್ರೇನ್ ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಾರೆ ಎನ್ನುವುದೇ ಕಷ್ಟದ ವಿಚಾರ. ರಷ್ಯಾದ ಕಾರ್ಯತಂತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರು ಉಕ್ರೇನ್ ಅನ್ನು ಎಷ್ಟು ಸಾಧ್ಯವೋ ಅಷ್ಟು ಸುತ್ತುವರಿದು, ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.
Advertisement
ಬೋರಿಸ್ ಜಾನ್ಸನ್ ಭಾರತದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಮೋದಿಯನ್ನು ಉಕ್ರೇನ್‌ಗೆ ಬೆಂಬಲ ನೀಡುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವಿಕಿರಣ ವಿರೋಧಿ ಔಷಧಿ ಸಂಗ್ರಹಿಸಿ – ಉಕ್ರೇನಿಯನ್ನರಿಗೆ ಝೆಲೆನ್ಸ್ಕಿ ಕರೆ
Advertisement
ನಾನು ಈಗಾಗಲೇ ಉಕ್ರೇನ್ ಬಗ್ಗೆ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಉಕ್ರೇನ್‌ನ ಬೂಚಾದಲ್ಲಿ ನಡೆದ ಘಟನೆಯನ್ನು ಭಾರತೀಯರೂ ಖಂಡಿಸಿದ್ದಾರೆ. ಆದರೂ ಭಾರತ ರಷ್ಯಾದೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದೆ ಎಂಬುದನ್ನು ನಾವು ಗಮನಿಸಲೇಬೇಕಾದ ವಿಚಾರ. ನಾವು ಭಾರತ-ರಷ್ಯಾ ಸಂಬಂಧವನ್ನು ಒಪ್ಪಿಕೊಂಡೇ ಮುನ್ನಡೆಯಬೇಕು ಎಂದಿದ್ದಾರೆ.