InternationalLatestMain Post

ವಿಕಿರಣ ವಿರೋಧಿ ಔಷಧಿ ಸಂಗ್ರಹಿಸಿ – ಉಕ್ರೇನಿಯನ್ನರಿಗೆ ಝೆಲೆನ್ಸ್ಕಿ ಕರೆ

ಕೀವ್: ರಷ್ಯಾ ಉಕ್ರೇನ್ ಮೇಲೆ ಪರಮಾಣು ಬಾಂಬ್ ದಾಳಿ ನಡೆಸುವ ಬೆದರಿಕೆ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನಿಯನ್ನರಿಗೆ ವಿಕಿರಣ ವಿರೋಧಿ ಔಷಧಿಗಳನ್ನು ಸಂಗ್ರಹಿಸಲು ಕರೆ ನೀಡಿದ್ದಾರೆ.

ನಾವು ರಷ್ಯಾದ ಯಾವುದೇ ಬೆದರಿಕೆಗೂ ತಯಾರಾಗಿರಬೇಕು. ರಷ್ಯಾ ನಮ್ಮ ಮೇಲೆ ಯಾವುದೇ ಆಯುಧಗಳನ್ನೂ ಬಳಸಬಹುದು ಎಂಬುದು ನನಗೆ ಮನವರಿಕೆಯಾಗಿದೆ. ಹೀಗಾಗಿ ಇವುಗಳಿಂದಾಗಬಹುದಾದ ಅಡ್ಡ ಪರಿಣಾಮವನ್ನು ನಿಗ್ರಹಿಸಲು ವಿಕಿರಣ ವಿರೋಧಿ ಔಷಧಿಯನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್‌ಫೋನ್‌ನಿಂದ ಉಳಿಯಿತು ಉಕ್ರೇನ್‌ ಸೈನಿಕನ ಜೀವ

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿತ್ತು. ಇದಾದ ಕೆಲವೇ ದಿನಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಯಾವುದೇ ದೇಶ ಉಕ್ರೇನ್ ಪರವಾಗಿ ನಮ್ಮ ಮೇಲೆ ನೇರವಾಗಿ ಯುದ್ಧ ಮಾಡಿದರೆ ಪರಮಾಣು ದಾಳಿ ಮಾಡುವುದಕ್ಕೂ ನಾವು ಹಿಂಜರಿಯಲ್ಲ ಎಂದ ರಷ್ಯಾ ಹೇಳಿತ್ತು. ಉಕ್ರೇನ್ ಮೇಲೆ ಪರಮಾಣು ದಾಳಿಯ ಬೆದರಿಕೆಯಿದ್ದರೂ, ರಷ್ಯಾ ಇಲ್ಲಿಯವರೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್

Leave a Reply

Your email address will not be published.

Back to top button