ಪಣಜಿ: ಸುಮಾರು 240 ಪ್ರಯಾಣಿಕರಿದ್ದ ರಷ್ಯಾದ ರಾಜಧಾನಿ ಮಾಸ್ಕೋದಿಂದ (Moscow) ಗೋವಾಗೆ (Goa) ಹೊರಟಿದ್ದ ವಿಮಾನವೊಂದರಲ್ಲಿ (Flight) ಬಾಂಬ್ ಬೆದರಿಕೆ (Bomb threat) ಕರೆ ಬಂದಿದ್ದು, ವಿಮಾನವನ್ನು ಉಜ್ಬೇಕಿಸ್ತಾನದಲ್ಲಿ (Uzbekistan) ತುರ್ತುಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಪೆರ್ಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ಹೊರಟಿದ್ದ ಅಝುರ್ ಏರ್ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಬಳಿಕ ಅದನ್ನು ಉಜ್ಬೇಕಿಸ್ತಾನದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿ 2 ಶಿಶುಗಳು, 7 ಸಿಬ್ಬಂದಿ ಸೇರಿದಂತೆ ಒಟ್ಟು 238 ಪ್ರಯಾಣಿಕರು ಇದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೈಟೆನ್ಷನ್ ಕೆಳಗೆ ನಗರದಲ್ಲಿವೆಯಂತೆ 10 ಸಾವಿರ ಮನೆಗಳು- ಖಡಕ್ ನೋಟಿಸ್ ಕೊಡಲು ಬಿಬಿಎಂಪಿ ತಯಾರಿ
Advertisement
❗ The #Russia’n airliner Azur Air, which made an emergency landing due to a false report of a bomb on board, has landed safely in #Goa, the Russian Consulate General in Mumbai said. pic.twitter.com/l98MWBOTw7
— Russia in India ???????? (@RusEmbIndia) January 10, 2023
Advertisement
ವರದಿಗಳ ಪ್ರಕಾರ, ವಿಮಾನ ಶನಿವಾರ ಮುಂಜಾನೆ 4:15ರ ವೇಳೆಗೆ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಇದಕ್ಕೂ ಮುನ್ನ 2:30ರ ವೇಳೆಗೆ ದಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರು ಬಾಂಬ್ ಬೆದರಿಕೆಯ ಮೇಲ್ ಅನ್ನು ಸ್ವೀಕರಿಸಿದ್ದು, ಅದನ್ನು ಉಜ್ಬೇಕಿಸ್ತಾನಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
2 ವಾರಗಳ ಇಂದಷ್ಟೇ ಇಂತಹುದೇ ಇನ್ನೊಂದು ಹುಸಿ ಬಾಂಬ್ ಬೆದರಿಕೆ ವರದಿಯಾಗಿತ್ತು. ಜನವರಿ 9ರಂದು 244 ಪ್ರಯಾಣಿಕರಿದ್ದ ವಿಮಾನ ಮಾಸ್ಕೋದಿಂದ ಗೋವಾಗೆ ಬರುತ್ತಿದ್ದ ಸಂದರ್ಭ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಮಾನವನ್ನು ಜಾಮ್‌ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಇದನ್ನೂ ಓದಿ: ತನ್ನ ಬೆಕ್ಕು ಕದ್ದಿದ್ದಾರೆಂದು ಶಂಕಿಸಿ ನೆರೆಮನೆಯವರ ಪಾರಿವಾಳಗಳಿಗೆ ವಿಷ ಉಣಿಸಿದ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k