ತಡರಾತ್ರಿ ಪಾಕಿಸ್ತಾನದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಭಾರತ ತಕ್ಕ ಪಾಠ ಕಲಿಸಿದೆ. ಈ ಹಿನ್ನೆಲೆ ಬಾಲಿವುಡ್ ಮಂದಿ ಅನುಪಮ್ ಖೇರ್, ರಿತೇಶ್ ಸೇರಿದಂತೆ ಅನೇಕರು ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಚರಣೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ:9 ಉಗ್ರರ ನೆಲೆಗಳು ಉಡೀಸ್- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?
ಭಾರತ್ ಮಾತಾ ಕಿ ಜೈ ಆಪರೇಷನ್ ಸಿಂಧೂರ ಎಂದು ಅನುಪಮ್ ಖೇರ್ (Anupam Kher) ಸೋಷಿಯ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:Operation Sindoor | 23 ನಿಮಿಷದ ದಾಳಿಗೆ 80ಕ್ಕೂ ಹೆಚ್ಚು ಉಗ್ರರು ಮಟ್ಯಾಶ್
भारत माता की जय! 🇮🇳🇮🇳🇮🇳#OperationSindoor
— Anupam Kher (@AnupamPKher) May 7, 2025
ಜೈ ಹಿಂದ್ ಸೇನಾ, ಭಾರತ್ ಮಾತಾ ಕಿ ಜೈ ಎಂದು ನಟ ರಿತೇಶ್ ದೇಶ್‌ಮುಖ್ ಬರೆದಿದ್ದಾರೆ.
Jai Hind Ki Sena … भारत माता की जय !!!! #OperationSindoor pic.twitter.com/OtjxdLJskC
— Riteish Deshmukh (@Riteishd) May 6, 2025
ನಿಮ್ರತ್ ಕೌರ್ ಎಕ್ಸ್‌ನಲ್ಲಿ, ನಮ್ಮ ಪಡೆಗಳೊಂದಿಗೆ ಒಗ್ಗೂಡಿ. ಒಂದು ದೇಶ. ಒಂದು ಮಿಷನ್. ಜೈಹಿಂದ್, ಆಪರೇಷನ್ ಸಿಂಧೂರ್. ಜೈ ಹಿಂದ್ ಕಿ ಸೇನಾ ಎಂದು ಬರೆದುಕೊಂಡಿದ್ದಾರೆ.
United with our forces. One country. One mission. #JaiHind 🇮🇳 #OperationSindoor@narendramodi @SpokespersonMoD @rajnathsingh pic.twitter.com/EsWURU6fRc
— Nimrat Kaur (@NimratOfficial) May 7, 2025
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಇದೀಗ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.