ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರು. ಹಿಂದಿ ಚಿತ್ರರಂಗಕ್ಕೆ ಸೀಮಿತವಾಗದೇ ಪರಭಾಷಾ ಚಿತ್ರಗಳಲ್ಲೂ ಛಾಪೂ ಮೂಡಿಸುತ್ತಿರುವ ಕಲಾವಿದೆ. ಸದ್ಯ ತೆಲುಗು ಹೆಸರಿಡದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಅಂದ್ರೆ ಸೆಟ್‌ನಲ್ಲಿ ನಟ ವಿಷ್ಣು ಮಂಚುಗಾಗಿ ಸನ್ನಿ ಲಿಯೋನ್ ಭರ್ಜರಿ ಅಡುಗೆ ಮಾಡಿದ್ದಾರೆ. ಈ ವಿಡಿಯೋ ಈಗ ಬಾರಿ ವೈರಲ್ ಆಗುತ್ತಿದೆ.
ನಟಿ ಸನ್ನಿ ಲಿಯೋನ್‌ಗೆ ಪ್ರತಿನಿತ್ಯದ ಅಪ್‌ಡೇಟ್‌ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ ಈ ಮೂಲಕ ತಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬ ವಿಚಾರಗಳನ್ನು ಅಭಿಮಾನಿಗಳಿಗೆ ಅಪ್‌ಡೇಟ್ ಮಾಡ್ತಿರತ್ತಾರೆ. ಈಗ ಸನ್ನಿ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈ ವೇಳೆ ಚಿತ್ರೀಕರಣದ ಸೆಟ್‌ನಲ್ಲಿ ರುಚಿ ರುಚಿಯಾದ ಆಲೂ ಪರೋಟ ಮಾಡಿ, ವಿಷ್ಣು ಮಂಚು ಅವರಿಗೆ ಕೊಟ್ಟಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಸನ್ನಿ ಲಿಯೋನ್ ಕುಕ್ಕಿಂಗ್ ವಿಡಿಯೋದಲ್ಲಿ ಆಲು ಪರೋಟ ಮಾಡುವ ವಿಧಾನದ ತೋರಿಸುತ್ತಾ ಸಹನಟ ವಿಷ್ಣು ಮಂಚು ಅವರಿಗೆ ಆಲೂ ಪರೋಟ ಬೊಂಬಾಟ್ ಭೋಜನ ಮಾಡಿ ಕೊಟ್ಟಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಬಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ:ಮದುವೆ ನಂತರ ರಶ್ಮಿಕಾ ಮಂದಣ್ಣ ಜತೆ ಮನಾಲಿಯಲ್ಲಿ ಕಾಣಿಸಿಕೊಂಡ ರಣಬೀರ್ ಕಪೂರ್
View this post on Instagram
ಜಿ. ನಾಗೇಂದ್ರ ರೆಡ್ಡಿ ಬರೆದಿರುವ ಚಿತ್ರಕಥೆಗೆ ಈಶಾನ್ ಸೂರ್ಯ ನಿರ್ದೇಶನ ಮಾಡ್ತಿದ್ದಾರೆ. ಚಿತ್ರದಲ್ಲಿ ವಿಷ್ಣು ಮಂಚು ನಾಯಕಿಯಾಗಿ ಪಾಯಲ್ ರಜಪೂತ್ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಲಿಯೋನ್ ಮತ್ತು ಶಿವ ಬಾಲಾಜಿ ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ಸನ್ನಿ ಹೊಸ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಸನ್ನಿ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.