BollywoodCinemaDistrictsKarnatakaLatestLeading NewsMain Post

ಮದುವೆ ನಂತರ ರಶ್ಮಿಕಾ ಮಂದಣ್ಣ ಜತೆ ಮನಾಲಿಯಲ್ಲಿ ಕಾಣಿಸಿಕೊಂಡ ರಣಬೀರ್ ಕಪೂರ್

ಮದುವೆಯಾಗಿ ಇನ್ನೊ ಹತ್ತು ದಿನಗಳು ಆಗಿಲ್ಲ. ಅಷ್ಟರಲ್ಲಿ ಪತ್ನಿಯನ್ನು ಏಕಾಂಗಿಯಾಗಿ ಬಿಟ್ಟು ಮನಾಲಿ ಸೇರಿಕೊಂಡಿದ್ದಾರೆ ಬಾಲಿವುಡ್ ನಟ ರಣಬೀರ್ ಕಪೂರ್. ಮನಾಲಿಯ ಸುಂದರ ತಾಣಕ್ಕೆ ರಣಬೀರ್ ಕರೆದುಕೊಂಡು ಹೋಗಿದ್ದು ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನು ಅನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

ಹಾಗಂತ ತಪ್ಪಾಗಿ ಭಾವಿಸಬೇಕಿಲ್ಲ. ರಣಬೀರ್ ಮತ್ತು ರಶ್ಮಿಕಾ ‘ಅನಿಮಲ್’ ಹೆಸರಿನ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಹಿಮಾಚಲ ಪ್ರದೇಶದ ಮನಾಲೆಯಲ್ಲಿ ನಡೆಯುತ್ತಿದೆ. ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ನಿನ್ನೆ ಮನಾಲೆಗೆ ಬಂದು ಇಳಿದಿದ್ದಾರೆ. ಇವರನ್ನು ಅಲ್ಲಿನ ಸಿಬ್ಬಂದಿಗಳು ಟೋಪಿಹಾಕಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಶೇಷ ಕಥಾವಸ್ತುವಿದ್ದು, ರಶ್ಮಿಕಾಗೆ ಬಾಲಿವುಡ್ ನಲ್ಲಿ ಒಂದೊಳ್ಳೆ ಬ್ರೇಕ್ ಕೊಡಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ವಿಶೇಷ ಪಾತ್ರವನ್ನೂ ರಶ್ಮಿಕಾ ನಿರ್ವಹಿಸುತ್ತಿದ್ದಾರಂತೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಖ್ಯಾತಿಯ ಸಂದೀಪ್ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ರೆಡ್ಡಿ ರೀತಿಯ ಯಾವ ದೃಶ್ಯಗಳೂ ಸಿನಿಮಾದಲ್ಲಿ ಇರುವುದಿಲ್ಲವಂತೆ. ಆದರೆ, ರೋಮ್ಯಾಂಟಿಕ್ ದೃಶ್ಯಗಳಿಗೆ ಈ ಸಿನಿಮಾದಲ್ಲಿಯೂ ಅವಕಾಶ ಕೊಟ್ಟಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಕೂಡ ತಾರಾ ಬಳಗದಲ್ಲಿ ಇದ್ದಾರೆ. ಇವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಣಬೀರ್, ರಶ್ಮಿಕಾ, ಬಾಬಿ ಮತ್ತು ಅನಿಲ್ ರೀತಿಯ ಹೆಸರಾಂತ ಕಲಾವಿದರೇ ಈ ಸಿನಿಮಾದಲ್ಲಿ ಇರುವುದರಿಂದ ಅಭಿಮಾನಿಗಳು ಈಗಿನಿಂದಲೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Leave a Reply

Your email address will not be published.

Back to top button