ರಣ್‌ಬೀರ್ ಕಪೂರ್ ಜತೆಯಿರೋ ರಶ್ಮಿಕಾ ವಿಡಿಯೋ ವೈರಲ್

1 Min Read

ಶ್ಮಿಕಾ ಮಂದಣ್ಣ ಸದ್ಯ ಸಿನಿಚಿತ್ರರಂಗದ ಮೋಸ್ಟ್ ಬ್ಯುಸಿಯೇಸ್ಟ್ ನಟಿ, `ಪುಷ್ಪ’ ಸೂಪರ್ ಡೂಪರ್ ಸಕ್ಸಸ್ ನಂತರ ಸಾಲು ಸಾಲು ಅವಕಾಶಗಳ ಸುರಿಮಳೆಯೇ ಹರಿದು ಬರುತ್ತಿದೆ. ಸದ್ಯ ಬಾಲಿವುಡ್ ಹ್ಯಾಡ್‌ಸಮ್ ಹಂಕ್ ರಣ್‌ಬೀರ್ ಕಪೂರ್ ಜತೆ ರಶ್ಮಿಕಾ ಸಿನಿಮಾ ಮಾಡಲು ಮನಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ರಣ್‌ಬೀರ್ ಜತೆಯಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಮದುವೆ ಆಗಿ ಹತ್ತೇ ದಿನಕ್ಕೆ ರಣ್‌ಬೀರ್ ಕಪೂರ್ ಒಪ್ಪಿಕೊಂಡಿರುವ ಸಿನಿಮಾಗಳತ್ತ ಮುಖ ಮಾಡಿದ್ದಾರೆ. `ಅನಿಮಲ್’ ಚಿತ್ರಕ್ಕಾಗಿ ರಣ್‌ಬೀರ್ ಮತ್ತು ರಶ್ಮಿಕಾ ಮನಾಲಿಗೆ ಬಂದಿಳಿದಿದ್ದಾರೆ. ಮನಾಲಿ ಸುಂದರ ತಾಣದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದ್ದು, ರಣ್‌ಬೀರ್ ಮತ್ತು ರಶ್ಮಿಕಾ ಸಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ರಣ್‌ಬೀರ್ ಬಿಳಿ ಬಣ್ಣದ ಕುರ್ತಾದಲ್ಲಿ ಕಾಣಸಿಕೊಂಡರೆ, ರಶ್ಮಿಕಾ ರೆಡ್ ಬಾರ್ಡರ್‌ನ ಬಾದಮಿ ಬಣ್ಣದ ಸೀರೆನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ `ಅನಿಮಲ್’ ಚಿತ್ರದಲ್ಲಿ ರಣ್‌ಬೀರ್ ಕಪೂರ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಡಿಫರೆಂಟ್ ಕಂಟೆಂಟ್‌ನಿಂದ ಮೋಡಿ ಮಾಡಲು ಈ ಜೋಡಿ ಸಜ್ಜಾಗಿದ್ದಾರೆ. ಏಪ್ರಿಲ್ 22ರಿಂದ `ಅನಿಮಲ್’ ಚಿತ್ರದ ಶೂಟಿಂಗ್ ಮನಾಲಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಸೋನು ಸೂದ್‌ಗೆ ವಿಲನ್ ಪಾತ್ರಗಳೇ ಬರುತ್ತಿಲ್ಲವಂತೆ

ʻಸಂಜುʼ ಚಿತ್ರದ ಸೂಪರ್ ಸಕ್ಸಸ್ ನಂತರ ರಣ್‌ಬೀರ್ ನಟನೆಯ ಯಾವೊಂದು ಚಿತ್ರಗಳು ರಿಲೀಸ್ ಆಗಿಲ್ಲ. ಜತೆಗೆ `ಪುಷ್ಪ’ ಚಿತ್ರದ ನಂತರ ರಶ್ಮಿಕಾ ಸಿನಿಮಾಗಳ ಮೇಲೂ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ. ಇವರಿಬ್ಬರು ಈಗ ಒಟ್ಟಿಗೆ ಚಿತ್ರ ಮಾಡುತ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *