ಬಾಲಿವುಡ್ ಮತ್ತು ಸೌತ್ ಚಿತ್ರಗಳಲ್ಲಿ ಸೋನು ಸೂದ್ ಖಡಕ್ ವಿಲನ್ ಆಗಿ ಗುರುತಿಸಿಕೊಂಡವರು. ಯಾವುದೇ ಪಾತ್ರ ಕೊಟ್ಟು, ಆ ಪಾತ್ರವೇ ತಾವಾಗಿ ಅಭಿನಯಿಸಿಸೋ ಮಹಾನ್ ಕಲಾವಿದ ಸೋನು ಸೂದ್. ಆದರೆ ಈಗ ಇವರ ಇಮೇಜ್ ಬದಲಾಗಿದೆ. ನಟ ಸೋನು ಸೂದ್‌ಗೆ ಯಾರು ಈಗ ವಿಲನ್ ಪಾತ್ರಗಳನ್ನು ಆಫರ್ ಮಾಡುತ್ತಿಲ್ಲ ಎಂದು ಖುದ್ದು ಸೋನು ಸೂದ್ ಹೇಳಿಕೊಂಡಿದ್ದಾರೆ.
Advertisement
ವಿಲನ್ ಆಗಿ ಚಿತ್ರರಂಗದಲ್ಲಿ ಸೌಂಡ್ ಮಾಡಿದ್ದ ಸೋನು ಸೂದ್, ಕೊವೀಡ್ ಸಮಯದಲ್ಲಿ ಸಾವಿರಾರು ಜನರ ಕಷ್ಟಗಳಿಗೆ ನೆರವಾಗಿದ್ರು.ರೀಲ್ ಅಲ್ಲಾ ರಿಯಲ್ ಲೈಫ್‌ನಲ್ಲೂ ಹೀರೋ ಆಗಿ ಮಿಂಚಿದ್ರು. ಈ ಮೂಲಕ ಅದೆಷ್ಟೋ ಜನರಿಗೆ ನಟ ಸೋನು ದೇವರಾಗಿದ್ದಾರೆ. ಅಭಿಮಾನಿಗಳು ಕೂಡ ಈಗ ಸೋನು ಸೂದ್ ಅವರನ್ನ ನೋಡುವ ದೃಷ್ಟಿಕೋನ ಬದಲಾಗಿದೆ.
Advertisement
Advertisement
ಯಾರು ನನಗೆ ವಿಲನ್ ಪಾತ್ರಗಳನ್ನು ಆಫರ್ ಮಾಡುತ್ತಿಲ್ಲ. ಕೋವಿಡ್ ಮೊದಲು ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದೆ ಆದರೆ ಈಗ ನಿರ್ದೇಶಕರು ನನಗಾಗಿ ಕಥೆಯನ್ನೇ ಬದಲಾಯಿಸಿದ್ದಾರೆ. ಇದು ನನಗೆ ಸಂಪೂರ್ಣ ಹೊಸ ಇನ್ನಿಂಗ್ಸ್ ಎಂದಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!
Advertisement
ನಟ ಸೋನು ಸೂದ್ ಸಿನಿಮಾಗಳ ಜತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಯ ಶೋವೊಂದಕ್ಕೆ ನಿರೂಪಕನಾಗಿ ಜವಬ್ದಾರಿ ಹೊತ್ತಿದ್ದಾರೆ. ಒಟ್ನಲ್ಲಿ ಸೋನು ಸೂದ್ ಸಿನಿಮಾ ಸಕ್ಸಸ್ ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ.