ಮುಂಬೈ: ಬಾಲಿವುಡ್ ಸೆಲೆಬ್ರಿಟಿ ಸ್ಟಾರ್ ಆಗಿರುವ ರಣವೀರ್, ದೀಪಿಕಾ ಜೋಡಿ ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದಾರೆ. 2022ರ ಐಪಿಎಲ್ಗೆ 2 ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳಲಿದ್ದು, ರಣವೀರ್ ಐಪಿಎಲ್ ತಂಡ ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಅದಾನಿ ಗ್ರೂಪ್, ಆರ್ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್ ಸೇರಿದಂತೆ ವಿದೇಶಿ ಕಾರ್ಪೋರೇಟ್ ಕಂಪೆನಿಗಳು ಬಿಡ್ ಸಲ್ಲಿಸಲು ಮುಂದಾಗಿವೆ. ಆದರೆ ಈ ನಡುವೆ ಬಾಲಿವುಡ್ ಸೂಪರ್ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಐಪಿಎಲ್ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್
ಐಪಿಎಲ್ ಹಾಗೂ ಬಾಲಿವುಡ್ ನಡುವೆ ವಿಶೇಷ ಸಂಬಂಧ ಹೊಂದಿದ್ದು, ಈಗಾಗಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಮತ್ತು ಜೂಹಿ ಚಾವ್ಲಾ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರೀತಿ ಝಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ತಂಡಗಳನ್ನು ನೋಡಬಹುದಾಗಿದೆ. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ
ದೀಪಿಕಾ ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಆಕೆಯ ತಂದೆ ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್ ಆಗಿದ್ದಾರೆ. ರಣವೀರ್ ಇಂಗ್ಲಿಷ್ ಪ್ರೀಮಿಯರ್ ಲೀಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಬ್ಯಾಸ್ಕೆಟ್ಬಾಲ್ ಲೀಗ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.