ಕನ್ನಡದ ‘ಗಿಲ್ಲಿ’ (Gilli Kannada Film) ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಬೆಡ್‌ರೂಮ್ ಫೋಟೋಶೂಟ್ ಹಂಚಿಕೊಂಡು ಸಖತ್ ವೈರಲ್ ಆಗ್ತಿದ್ದಾರೆ. ನಟಿಯ ಪೋಸ್ಟ್ ನೋಡಿ ‘ನಿನ್ನ ಗಂಡ ಎಲ್ಲಮ್ಮ’ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ:ನಾನು ಸಿನಿಮಾ ಸಕ್ಸಸ್‌ಗೆ ಪ್ರಾರ್ಥಿಸಲ್ಲ: ಸೀಕ್ರೆಟ್ ಬಿಚ್ಚಿಟ್ಟ ಸಲ್ಮಾನ್ ಖಾನ್
ಪಿಂಕ್ ಡ್ರೆಸ್‌ನಲ್ಲಿ ರಕುಲ್ ಮಿಂಚಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ‘ನಗುವುದು ಕೂಡ ಜೀವನದ ಒಂದು ವಿಧಾನ’ ಎಂದು ಹೊಸ ಪೋಸ್ಟ್‌ಗೆ ರಕುಲ್ ಅಡಿಬರಹ ನೀಡಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಲು ಇದು ನಿಮ್ಮ ದಾರಿ ಎಂದೆಲ್ಲಾ ನಟಿಗೆ ನೆಟ್ಟಿಗರು ಟೀಕಿಸಿದ್ದಾರೆ. ಬಗೆ ಬಗೆಯ ಕಾಮೆಂಟ್‌ಗಳು ನಟಿಯ ಪೋಸ್ಟ್‌ಗೆ ಹರಿದು ಬರುತ್ತಿವೆ. ಇದನ್ನೂ ಓದಿ:ಯುಗಾದಿ ಸಂಭ್ರಮ ಹೆಚ್ಚಿಸುವ ಸಿನಿಮಾ ಹಾಡುಗಳು
ರಕುಲ್‌ಗೆ ಈಗ ಬೇಡಿಕೆ ಕಮ್ಮಿಯಾಗಿದೆ. ಆಗೊಂದು ಈಗೊಂದು ಸಿನಿಮಾ ಮಾಡ್ತಿರುತ್ತಾರೆ. ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮಿಳಿನ ‘ದಿಶಾ’, ಬಾಲಿವುಡ್‌ನ ‘ದೇ ದೇ ಪ್ಯಾರ್ ದೇ 2’ ಸಿನಿಮಾಗಳಲ್ಲಿ ರಕುಲ್ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾ ಸೋಲುಗಳಿಂದ ಕಂಗಲಾಗಿರೋ ನಟಿ, ಈಗ ಯಶಸ್ಸಿಗಾಗಿ ಎದುರು ನೋಡ್ತಿದ್ದಾರೆ.
2024ರಲ್ಲಿ ನಿರ್ಮಾಪಕ ಕಮ್ ನಟ ಜಾಕಿ ಭಗ್ನಾನಿ ಜೊತೆ ರಕುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ನಟಿ ಮದುವೆಯ ಮುದ್ರೆ ಒತ್ತಿದ್ದರು.
ಕನ್ನಡದ ‘ಗಿಲ್ಲಿ’ ಸಿನಿಮಾದಲ್ಲಿ ಜಗ್ಗೇಶ್ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಅವರು ಬಣ್ಣದ ಬದುಕಿಗೆ ಕಾಲಿಟ್ಟರು.