ಬಾಲಿವುಡ್‌ ನಟ ಸೋನು ಸೂದ್ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ

Public TV
1 Min Read
sonali sood

ಬಾಲಿವುಡ್ ನಟ ಸೋನು ಸೂದ್  (Sonu Sood) ಪತ್ನಿ ಸೋನಾಲಿ (Sonali Sood) ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ. ಮುಂಬೈ- ನಾಗಪುರ ಹೆದ್ದಾರಿಯಲ್ಲಿ ಮಾ.24ರ ರಾತ್ರಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣ ಮಾಡುವಾಗ ಸೋನು ಸೂದ್ ಪತ್ನಿ ಜೊತೆ ಸಹೋದರಿ ಮತ್ತು ಸಹೋದರಿಯ ಮಗ ಇದ್ದರು. ಈ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

sonali sood car

ಸೋನಾಲಿ ಸೂದ್ ಪ್ರಯಾಣಿಸುತ್ತಿದ್ದ ಕಾರು, ಟ್ರಕ್‌ಗೆ ಹೊಡೆದು ಅಪಘಾತ ಸಂಭವಿಸಿದೆ. ಸೋನು ಸೂದ್ ಪತ್ನಿ ಸೇರಿದಂತೆ ಇಬ್ಬರ ಸ್ಥಿತಿಯು ಗಂಭೀರವಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಕೇಳ್ತಿದ್ದಂತೆ ಸೋನು ಸೂದ್ ಆಗಮಿಸಿದ್ದಾರೆ. ಮುಂದಿನ 48ರಿಂದ 72 ಗಂಟೆಗಳ ಕಾಲ ಸೋನಾಲಿ ಮತ್ತು ಸಹೋದರಿಯ ಮಗನಿಗೆ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ಮೂಲಗಳಿಂದ ವರದಿಯಾಗಿದೆ. ಸೋನಾಲಿ ಸಹೋದರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಸಣ್ಣ ಪುಟ್ಟ ಗಾಯಗಳಾಗಿವೆ. ಅವರು ಚೇತರಿಸಿಕೊಳ್ತಿದ್ದಾರೆ. ಇದನ್ನೂ ಓದಿ:ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

ಸೋನು ಸೂದ್ ಸಿನಿಮಾದಲ್ಲಿ ವಿಲನ್ ಆಗಿದ್ರೂ ಕೂಡ ರಿಯಲ್ ಲೈಫ್‌ನಲ್ಲಿ ಹೀರೋ ಆಗಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಅವರು ಸಹಾಯ ಮಾಡುತ್ತಲೇ ಇರುತ್ತಾರೆ. ಇಂತಹ ನಟನ ಪತ್ನಿಗೆ ಈಗ ಕಾರು ಅಪಘಾತವಾಗಿರೋದು ಫ್ಯಾನ್ಸ್‌ಗೆ ಬೇಸರ ತರಿಸಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

sonu sood

ಇನ್ನೂ ಸೋನಾಲಿ ಜೊತೆ ಸೋನು ಸೂದ್ ಅವರು 1996ರಲ್ಲಿ ಮದುವೆಯಾದರು. ಈ ದಂಪತಿಗೆ ಇಬ್ಬರೂ ಗಂಡು ಮಕ್ಕಳಿದ್ದಾರೆ.

Share This Article