ಹೃತಿಕ್ ರೋಶನ್ ವಿಶ್ವದ ಮೋಸ್ಟ್ ಹ್ಯಾಂಡ್‍ಸಮ್ ವ್ಯಕ್ತಿ

Public TV
1 Min Read
Hrithik Roshan

ಮುಂಬೈ: ಬಾಲಿವುಡ್ ಸ್ಪುರದ್ರೂಪಿ ನಟ ಹೃತಿಕ್ ರೋಶನ್ ವಿಶ್ವದ ಮೋಸ್ಟ್ ಹ್ಯಾಂಡ್‍ಸಮ್ ವ್ಯಕ್ತಿಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ತಮ್ಮ ಆಕರ್ಷಕ ದೇಹ ವಿನ್ಯಾಸದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಹೃತಿಕ್ ವಿಶ್ವದ ದೊಡ್ಡ ತಾರೆಗಳನ್ನು ಹಿಂದಿಕ್ಕಿ ವಿಶ್ವದ ಆಕರ್ಷಕ ಮತ್ತು ಸುಂದರ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಈ ಸ್ಪರ್ಧೆಯಲ್ಲಿ ಕ್ರಿಸ್ ಇವಾನ್, ಡೇವಿಡ್ ಬೈಕ್ಹಮ್, ರಾಬರ್ಟ್ ಪೈಟಿಸನ್ ಸೇರದಂತೆ ದೊಡ್ಡ ನಟರನ್ನು ಹೃತಿಕ್ ಹಿಂದಿಕ್ಕಿದ್ದಾರೆ. ಈ ಹಿಂದೆ 2018ರಲ್ಲಿಯೂ ಹೃತಿಕ್ ಈ ಸ್ಥಾನವನ್ನು ಪಡೆದುಕೊಂಡಿದ್ದರು. ಹೃತಿಕ್ ರೋಶನ್ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿಯೂ ಸ್ಟಾರ್ ಪಟ್ಟವನ್ನು ಹೊಂದಿದ್ದಾರೆ. ವಿಶ್ವದ ಹತ್ತು ಅತಿ ಸುಂದರ ನಟ/ವ್ಯಕ್ತಿಗಳಲ್ಲಿ ಹೃತಿಕ್ ರೋಶನ್ ತಮ್ಮ ಆಕರ್ಷಕ ವ್ಯಕ್ತಿತ್ವ, ಗುಡ್ ಲುಕ್ಸ್, ಚಾರ್ಮಿಂಗ್, ನಟನಾ ಕಲೆ, ನೀಳ ಮತ್ತು ಸದೃಢ ದೇಹದಿಂದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Hritik roshan

ಈ ಕುರಿತು ಪ್ರತಿಕ್ರಿಯಿಸಿರುವ ಹೃತಿಕ್ ರೋಶನ್, ಬಾಹ್ಯ ಸೌಂದರ್ಯ ಎಂದಿಗೂ ಮುಖ್ಯವಾಗಿರಲ್ಲ. ನಮ್ಮ ಅಂತರಾಳದ ಸೌಂದರ್ಯ ಅಂದ್ರೆ ಉತ್ತಮ ವ್ಯಕ್ತಿತ್ವ ನಮ್ಮನ್ನು ಆಕರ್ಷಕ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದಿದ್ದಾರೆ.

hrithik roshan

ಹೃತಿಕ್ ಕೇವಲ ನಟರಲ್ಲದೇ ಓರ್ವ ಉತ್ತಮ ಡ್ಯಾನ್ಸರ್ ಸಹ ಆಗಿದ್ದಾರೆ. ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಹೃತಿಕ್ ಇಂದಿಗೂ ವಿಭಿನ್ನ ಸಿನಿಮಾಗಳ ಮೂಲಕ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಕಷ್ಟಕರವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಹೃತಿಕ್ ಸಾಬೀತು ಮಾಡುತ್ತಾ ಬಂದಿದ್ದಾರೆ. 2011-12ರ ಸಾಲಿನ ವಿಶ್ವದ 50 ಸೆಕ್ಸಿ ವ್ಯಕ್ತಿಗಳ ಪಟ್ಟಿಯಲ್ಲಿ ಹೃತಿಕ್ ಅಗ್ರ ಸ್ಥಾನದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *