ಬೆಂಗಳೂರು: ದೆಹಲಿ ಬ್ಲಾಸ್ಟ್ (Delhi Blast) ಪ್ರಕರಣದಲ್ಲಿ ಭದ್ರತಾ ವೈಫಲ್ಯದ ಹೊಣೆಯನ್ನು ಪ್ರಧಾನಿ ಮೋದಿ (PM Modi) ಅವರೇ ಹೊತ್ತುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ನಾವು ಒಟ್ಟಾಗಿರಬೇಕು ಮಡಿದವರಿಗೆ ಸಂತಾಪಗಳನ್ನು, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪಾರ್ಥಿಸಬೇಕು. ಪುಲ್ವಾಮಾ, ಪಹಲ್ಗಾಮ್ ಸಂದರ್ಭದಲ್ಲಿಯೂ ಭದ್ರತಾ ವೈಪಲ್ಯವಾಯಿತು. ನೂನ್ಯತೆ ಯಾರದ್ದೇ ಇದ್ದರೂ ಒಪ್ಪಿಕೊಳ್ಳಲೇಬೇಕು. ಎಲ್ಲಾ ಹೊಣೆಗಾರಿಕೆ ಪ್ರಧಾನಿ ಮೋದಿ ತೆಗೆದುಕೊಳ್ಳಬೇಕು. ಈ ಬ್ಲಾಸ್ಟ್ ಬಿಹಾರ ಚುನಾವಣೆಗೆ ಏನು ಸಂದೇಶ? ಆಪರೇಷನ್ ಸಿಂಧೂರ ಯಾಕೆ ಆಯ್ತು? ಅದಕ್ಕೂ ಮುಂಚೆ ಏನಾಯ್ತು ಅಂತ ನೋಡಬೇಕಲ್ಲ. ಯಾಕೆ ಯಾರು ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಪ್ರಧಾನಿ ಯಾಕೆ ಜವಾಬ್ದಾರಿ ತೆಗೆದುಕೊಳ್ಳಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ದುರ್ಬುದ್ದಿ.. ಅದು ಇರೋ ಜನರಿಗೆ ಜಗತ್ತಿನಲ್ಲಿ ಯಾರೂ ಬುದ್ದಿ ಹೇಳೋಕೆ ಅಗೊಲ್ಲ: ಸಿ.ಟಿ.ರವಿ
ಇನ್ನೂ ನೇರವಾಗಿ ಪ್ರಧಾನಿ ಈ ಘಟನೆಯ ಜವಾಬ್ದಾರಿ ಹೊರಬೇಕು, ಬರೀ ರಾಹುಲ್ ಗಾಂಧಿ ಬಗ್ಗೆ ಕಾಮೆಂಟ್ ಮಾಡ್ತಾರೆ. ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ಯಾರು? ಕೇಂದ್ರದ ಭದ್ರತಾ ವೈಫಲ್ಯಕ್ಕೆ ಖಂಡಿಸುತ್ತೇನೆ. ಅದಾನಿ ಪೋರ್ಟ್‌ನಲ್ಲಿ ಎಷ್ಟು ಮಾದಕವಸ್ತು ಸಿಕ್ಕಿತು ಎಲ್ಲಿಯಾದರೂ ಸುದ್ದಿಯಾಯ್ತಾ? ಎಲ್ಲ ಮುಚ್ಚಿಟ್ಟರೆ ಹೇಗೆ? ಘಟನೆ ನಡೆದ ಬಳಿಕ ಆಪರೇಷನ್ ಸಿಂಧೂರ ಮಾಡಿದ್ದರು. ಇವತ್ತು ಸಂಜೆ ಬಿಜೆಪಿ ಏನು ಮಾಡುತ್ತೋ? ಬಿಜೆಪಿಗರು ಇದರಲ್ಲಿ ನಿಸ್ಸಿಮರಿದ್ದಾರೆ ಎಂದಿದ್ದಾರೆ.

