ಕೊಹಿಮಾ: ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ (ಎನ್‍ಡಿಪಿಪಿ) ಹೆಕಾನಿ ಜಖಲು (Hekani Jakhalu) ಅವರು ನಾಗಾಲ್ಯಾಂಡ್‍ನ (Nagaland) ವಿಧಾನಸಭೆಗೆ ಮೊದಲ ಶಾಸಕಿಯಾಗಿ (woman MLA) ಚುನಾಯಿತರಾಗಿದ್ದಾರೆ.
ಈಗಾಗಲೇ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಬಿಜೆಪಿಯ (BJP) ಮಿತ್ರ ಪಕ್ಷವಾದ ಎನ್‍ಡಿಪಿಪಿ (NDPP) ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ವಿಶೇಷವೆಂದರೆ ನಾಗಾಲ್ಯಾಂಡ್ ರಾಜ್ಯದ ಸ್ಥಾನಮಾನವನ್ನು ಪಡೆದ 60 ವರ್ಷಗಳ ನಂತರ ಮೊದಲ ಮಹಿಳಾ ಶಾಸಕಿ ಆಯ್ಕೆ ಆಗಿದ್ದಾರೆ. ಈ ಹೆಗ್ಗಳಿಕೆಗೆ ಬಿಜೆಪಿಯ ಮಿತ್ರ ಪಕ್ಷವಾದ ಎನ್‍ಡಿಪಿಪಿಯ ಹೆಕಾನಿ ಜಖಲು ಅವರು ಪಾತ್ರಾಗಿದ್ದಾರೆ. ದಿಮಾಪುರ್ – 3 ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
Advertisement
Advertisement
ಜಖಲು 31,874 (45.16%) ಮತಗಳನ್ನು ಪಡೆದರು. ಅವರ ಪ್ರತಿಸ್ಪರ್ಧಿ ಲೋಕ ಜನಶಕ್ತಿ ಪಕ್ಷದ ಅಝೆಟೊ ಝಿಮೊಮಿ ಅವರು 40.34 ಶೇಕಡಾ ಮತಗಳನ್ನು ಪಡೆದರು. ಸ್ಪರ್ಧೆಯು ಕೊನೆಗೊಳ್ಳುವವರೆಗೂ ಇಬ್ಬರ ನಡುವೆಯೂ ಭರ್ಜರಿ ಫೈಟ್ ಏರ್ಪಟ್ಟಿತ್ತು.
Advertisement
ಗುರುವಾರ ಮಧ್ಯಾಹ್ನ ರಾಜ್ಯದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಅಂತಿಮವಾಗಿ ಜಖಲು ಅವರನ್ನು ಭಾರತೀಯ ಚುನಾವಣಾ ಆಯೋಗ ಅಧಿಕೃತವಾಗಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಿದೆ. ಇಲ್ಲಿಯವರೆಗೆ ಒಬ್ಬ ಮಹಿಳೆ ಶಾಸಕರಾಗಿ ಆಯ್ಕೆಯಾಗಿಲ್ಲ. ಇದನ್ನೂ ಓದಿ: ನನಗೆ, ಕುಮಾರ ಬಂಗಾರಪ್ಪಗೆ ಇನ್ಮುಂದೆ ಅಣ್ಣ-ತಮ್ಮ ಎಂದು ಕರೆಯಬೇಡಿ : ಮಧು ಬಂಗಾರಪ್ಪ
Advertisement
ಈ ಬಾರಿ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿಸಿದ್ದರು. ಇದನ್ನೂ ಓದಿ: ತ್ರಿಪುರಾದಲ್ಲಿ ಬಿಜೆಪಿ, ನಾಗಾಲ್ಯಾಂಡ್ ಎನ್‌ಡಿಪಿಪಿ, ಮೇಘಾಲಯದಲ್ಲಿ ಎನ್‌ಪಿಪಿ ಮುನ್ನಡೆ