– ಮತ್ತೆರಡು ಪ್ರಕರಣ ಬಗ್ಗೆಯೂ ದೂರು ಸಲ್ಲಿಕೆ
ಬೆಂಗಳೂರು: ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ (Permanent Residence Certificate) ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ (BJP) ಇದೀಗ ರಾಜ್ಯಪಾಲರಿಗೆ (Governer) ದೂರು ನೀಡಿದೆ.
ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಸಿಟಿ ರವಿ, ಸುಧಾಕರ್ ಮತ್ತಿತರಿದ್ದ ಬಿಜೆಪಿ ನಿಯೋಗವು ಇಂದು (ಜು.15) ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ದೂರಿನಲ್ಲಿ ಪಿಆರ್‌ಸಿ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಪಿಆರ್‌ಸಿ ದೇಶದ ಭದ್ರತೆಗೆ ಆತಂಕ ತರಲಿದೆ. ಸರ್ಕಾರದ ಪಿಆರ್‌ಸಿಗೆ (PRC) ತಡೆಯೊಡ್ಡಲು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ನಿಖಿಲ್ ಬರ ವೀಕ್ಷಣೆ – ಸರ್ಕಾರಕ್ಕೆ ಎಕರೆಗೆ 25 ಸಾವಿರ ಪರಿಹಾರ ನೀಡಲು ಆಗ್ರಹ
ಇನ್ನೂ ಪಿಆರ್‌ಸಿ ಜೊತೆಗೆ ಮತ್ತೆರಡು ಪ್ರಕರಣದ ಬಗ್ಗೆಯೂ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ. ಚಿಕ್ಕಮಗಳೂರಿನಲ್ಲಿ ಬಡವರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ವಂಚನೆ ಪ್ರಕರಣ ಹಾಗೂ ಮಾಲೂರು ತಾಲೂಕು ಅಗ್ಗಲಕೋಟೆ ಗ್ರಾಮದಲ್ಲಿ ಶಾಲಾ ಜಮೀನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವನ್ನು ಬಿಜೆಪಿ ರಾಜ್ಯಪಾಲರ ಗಮನಕ್ಕೆ ತಂದು ದೂರು ನೀಡಿದೆ. ಇವರೆಡೂ ಪ್ರಕರಣಗಳ ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ರಾಜ್ಯದ ಸುರಕ್ಷತೆ ಮತ್ತು ಹಾಗೂ ಕನ್ನಡಿಗರ ಹಕ್ಕುಗಳಿಗೆ ಧಕ್ಕೆ ತರುವ ಕಾಂಗ್ರೆಸ್ ಸರ್ಕಾರದ ಸಂವಿಧಾನಬಾಹಿರ ‘ಶಾಶ್ವತ ನಿವಾಸ ಪ್ರಮಾಣಪತ್ರ’ (PRC) ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ, ಇಂದು ರಾಜ್ಯ ಬಿಜೆಪಿ ನಿಯೋಗದೊಂದಿಗೆ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಲೋಕಭವನದಲ್ಲಿ ಭೇಟಿ ಮಾಡಿ… pic.twitter.com/GkDHpbCkmQ
— R. Ashoka (@RAshokaBJP) July 15, 2026
ದೂರಿನ ನಂತರ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಮಾತನಾಡಿ, ಅಕ್ರಮವಾಗಿ ಪಿಆರ್‌ಸಿ ಮಾಡಲು ಸರ್ಕಾರ ಹೊರಟಿದೆ. ಇದನ್ನು ತಡೆಯುವಂತೆ ಕೋರಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಅಕ್ರಮ ನಿವಾಸಿಗಳಿಗೆ, ಕಾಂಗ್ರೆಸ್‌ಗೆ ವೋಟು ಹಾಕೋರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡುವ ಸಂಚು ನಡೀತಿದೆ. ಸರ್ಕಾರದ ನಡೆ ದೇಶದ ಭದ್ರತೆಗೆ ಅಪಾಯ. ಬಾಂಗ್ಲಾ ವಾಸಿಗಳು 20-30 ಲಕ್ಷ ಜನ ರಾಜ್ಯದಲ್ಲಿ ಇದ್ದಾರೆ. ಇವರನ್ನು ರಾಜ್ಯದ ಶಾಶ್ವತ ನಿವಾಸಿಗಳಾಗಿ ಮಾಡಲು ಸರ್ಕಾರ ಹೊರಟಿದೆ. ಜಿಬಿಎ, ಜಿ.ಪಂ, ತಾ.ಪಂ, ವಿಧಾನಸಭೆ ಚುನಾವಣೆಗೆ ಅಕ್ರಮವಾಗಿ ಪಿಆರ್‌ಸಿ ಕೊಡಲಾಗ್ತಿದೆ. ಕೂಡಲೇ ಇದನ್ನು ರದ್ದುಪಡಿಸಲು ರಾಜ್ಯಪಾಲರಿಗೆ ಕೋರಿದ್ದೇವೆ. ಪಿಆರ್‌ಸಿ ಕೊಡೋ ಅಧಿಕಾರ ರಾಜ್ಯಕ್ಕೆ ಇಲ್ಲ, ಕೇಂದ್ರಕ್ಕೆ ಮಾತ್ರ ಇರೋದು. ಸರ್ಕಾರಕ್ಕೆ ಎಚ್ಚರಿಸುವುದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5 ನಿವೇಶನ, 4 ಫ್ಲಾಟ್, ಕಂತೆ ಕಂತೆ ನೋಟು, ಚಿನ್ನಾಭರಣ; 100 ಕೋಟಿ ಆಸ್ತಿ ಪತ್ತೆ – ಎಂಜಿನಿಯರ್ ಅರೆಸ್ಟ್
