ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಪರ್ಸಂಟೇಜ್ ರಾಜಕಾರಣ ಚರ್ಚೆ ಜಾಲ್ತಿಯಲ್ಲಿರುವಂತೆ ಪರ್ಸಂಟೇಜ್ ರಾಜಕಾರಣದ ಪಿತಾಮಹರು ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ಗೆ ಬಿಜೆಪಿ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಟ್ವೀಟ್‍ನಲ್ಲಿ ಏನಿದೆ?:
12% ಡಿಕೆಶಿ, 10% ಸೀದಾರೂಪಯ್ಯ ಮೆಂದ ಇಲಾಖೆಗಳು ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ. ಹಾಗಾದರೆ ಈ ಇಲಾಖೆಗಳನ್ನು ನಿಭಾಯಿಸಿದ್ದ ಡಾ.ಎಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲರ ಪರ್ಸೆಂಟೇಜ್ ಎಷ್ಟು? ಎಲ್ಲ ಸೇರಿ 40%. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಸಿದ್ದರಾಮಯ್ಯನವರು ಹೇಳುತ್ತಿರುವುದು ಇವರಿಗೆ ಇರಬೇಕಲ್ಲವೇ? 6 ರಿಂದ 8% ಇದ್ದ ಲಂಚವನ್ನು 12% ಗೆ ಏರಿಸಿದ್ದೇ ಡಿಕೆಶಿ ಎಂದು ಸಲೀಂ ಬಹಿರಂಗವಾಗಿ ಹೇಳಿದ್ದರ ಬಗ್ಗೆ ಮೊದಲು ಮಾತನಾಡಿ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ
Advertisement
ಪರ್ಸೆಂಟ್ ರಾಜಕಾರಣದ ಪಿತಾಮಹರು ಯಾರು?
√ 12% ಡಿಕೆಶಿ
√ 10% ಸೀದಾರೂಪಯ್ಯ
ಮೆಂದ ಇಲಾಖೆಗಳು-
ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ.
ಹಾಗಾದರೆ ಈ ಇಲಾಖೆಗಳನ್ನು ನಿಭಾಯಿಸಿದ್ದ ಡಾ.ಎಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲರ ಪರ್ಸೆಂಟೇಜ್ ಎಷ್ಟು?
ಎಲ್ಲ ಸೇರಿ 40% !!!#CorruptCongress pic.twitter.com/CxPXSzS1L0
— BJP Karnataka (@BJP4Karnataka) November 28, 2021
Advertisement
ಹಾಗಾದರೆ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ್ದೇ ನೀವು ಎಂದಾಯ್ತಲ್ಲವೇ? ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದಲ್ಲೇ ಅಲ್ಲವೇ ಡಿಕೆಶಿ ಇಂಧನ ಸಚಿವರಾಗಿದ್ದದ್ದು? ಅವರ ಕಾಲದಲ್ಲೇ ಭ್ರಷ್ಟಾಚಾರ 12% ಗೆ ಏರಿಕೆ ಆಯ್ತು ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಿಸುಮಾತು ಪ್ರಕರಣದಿಂದ ತಿಳಿದು ಬಂದಿದೆ. ಇದರಲ್ಲಿ ನಿಮ್ಮ ಪಾಲೆಷ್ಟು ಸೀದಾರೂಪಯ್ಯ? ಗುತ್ತಿಗೆದಾರರ ಒಕ್ಕೂಟ ಬರೆದ ಪತ್ರವನ್ನು ಆಧರಿಸಿ ತನಿಖೆ ನಡೆಸುವುದಕ್ಕೆ ಸಿಎಂ ಈಗಾಗಲೇ ಆದೇಶ ನೀಡಿದ್ದಾರೆ. ತಾವು ಮುಖ್ಯಮಂತ್ರಿಯಾದ ಬಳಿಕ ನಡೆದ 10 ಕೋಟಿ ಮೇಲ್ಪಟ್ಟ ಎಲ್ಲ ಟೆಂಡರ್ ಗಳ ಪರಿಶೀಲನೆಗೂ ಸೂಚನೆ ನೀಡಿದ್ದಾರೆ. ನಿಮ್ಮ ಬಗ್ಗೆ ಹೇಳಿ, ಭ್ರಷ್ಟಾಚಾರದ ಪಿಸುಮಾತಿಗೆ ನೀವು ಉತ್ತರದಾಯಿಯಲ್ಲವೇ ಪರ್ಸಂಟೇಜ್ ಸೀದಾರೂಪಯ್ಯ?. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಿಜೆಪಿಗೆ ಮೋಸ ಮಾಡಲ್ಲ: ಕೆ.ಎಸ್. ಈಶ್ವರಪ್ಪ
Advertisement
Advertisement
ಸಿದ್ದರಾಮಯ್ಯನವರೇ, ಅಂದ ಹಾಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರದ ಪಿಸುಮಾತು ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಯಾರು? ಡಿಕೆಶಿ ಆರೋಪಿ ಸ್ಥಾನದಲ್ಲಿದ್ದಾರೆ. ನಿಮ್ಮ ಆಪ್ತ ಉಗ್ರಪ್ಪ ಆರೋಪಿಸಿದ್ದಾರೆ. ನೀವೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರ್ಸಂಟೇಜ್ ಏರಿಕೆಯಾಗಿದೆ. ತನಿಖೆ ಯಾರು ನಡೆಸಬೇಕು ಪರ್ಸಂಟೇಜ್‍ಸೀದಾರೂಪಯ್ಯ?. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಬಂಡುಕೋರ ಎಂದ ಲಕ್ಷ್ಮಿ ಹೆಬ್ಬಾಳ್ಕರ್