ಬೆಳಗಾವಿ: ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ಬಿಜೆಪಿಗೆ ಮೋಸ ಮಾಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿಯವರು ಮುಂಚೆ ನಮ್ಮ ಪಕ್ಷದಲ್ಲಿ ಇದ್ದರು. ಇಲ್ಲಿ ಬಂಡುಕೋರರಾಗಿ ಅವರಿಗೆ ಸಮಾಧಾನ ಸಿಗಲಿಲ್ಲ. ಈಗ ಅವರು ಬಿಜೆಪಿ ಪಕ್ಷಕ್ಕೆ ಹೋಗಿದ್ದು, ಅಲ್ಲಿಯೂ ಬಂಡುಕೋರ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬಿಜೆಪಿ ಪಕ್ಷ ನೋಡಿಕೊಳ್ಳುತ್ತದೆ. ನಾನು ಉತ್ತರ ಕೊಡುವುದಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಬಂಡುಕೋರ ಎಂದ ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ಈ ವಿಚಾರವಾಗಿ ಇಂದು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ಈಶ್ವರಪ್ಪ ಅವರು, ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ನಲ್ಲಿದ್ದಾಗ ಕಾಂಗ್ರೆಸ್‍ಗೆ ಮೋಸ ಮಾಡಿದ್ದರೂ ಅಂತ ಅವತ್ತು ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದರು. ಯಾವಾಗ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಂದರೋ ಅವಾಗ ಈ ವಿಚಾರ ನೆನಪಾಯ್ತಾ? ಸತ್ಯವನ್ನ ಸತ್ಯವಾಗಿ ಹೇಳಿದ್ರೆ ಅದು ಸತ್ಯ. ಅದೇ ಸತ್ಯವನ್ನ ತಮಗೆ ಬೇಕಾದಂತೆ ತಿರುಚಿ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ಬಿಜೆಪಿಗೆ ಮೋಸ ಮಾಡಲ್ಲ. ಅವರೇ ಸ್ಪಷ್ಟವಾಗಿ ಮೊದಲನೇ ವೋಟ್ ಬಿಜೆಪಿಗೆ ಕೊಡಿ, ಎರಡನೇ ವೋಟ್ ತಮ್ಮನಿಗೆ ಕೊಡಿ ಅಂತ ಓಪನ್ ಆಗಿ ಹೇಳುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ್‌ಗೆ ಪಾಪ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ ಏನ್ ಮಾಡೋದು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪತ್ನಿ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದಿದ್ದ ಪಾಪಿ ಪತಿ ಕೊನೆಗೆ ಶವವಾಗಿ ಪತ್ತೆ
ಒಂದೇ ವೇದಿಕೆಯಲ್ಲಿ ರಮೇಶ್, ಲಖನ್ ಪ್ರತ್ಯೇಕ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ, ಅಭ್ಯರ್ಥಿಯಾಗಿ ಏನು ಹೇಳಬೇಕು ಮೊದಲ ವೋಟ್ ತನಗೆ ಹಾಕಿ ಎನ್ನಬೇಕು ಹಾಗಾಗಿ ಹೇಳಿದ್ದಾರೆ ಅಷ್ಟೇ. ನಮ್ಮ ಯಾವ ಕಾರ್ಯಕರ್ತರಲ್ಲಿಯೂ ಕೂಡ ಗೊಂದಲವಿಲ್ಲ. ಇಡೀ ದೇಶದಲ್ಲೇ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವಿಲ್ಲ ಎಂದಿದ್ದಾರೆ.