ನವದೆಹಲಿ: ಎರಡು ಲೋಕಸಭಾ ಚುನಾವಣೆಯಲ್ಲಿ ನಿಖರ ಫಲಿತಾಂಶ ನೀಡಿ ಸುದ್ದಿಯಾಗಿದ್ದ ಟುಡೇಸ್ ಚಾಣಕ್ಯ ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆಯಲಿದೆ ಎಂದು ಹೇಳಿದ್ದರೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ನೆಕ್ ಟು ನೆಕ್ ಸ್ಪರ್ಧೆಯಿದೆ ಎಂದು ಭವಿಷ್ಯ ನುಡಿದಿದೆ.
#TCPoll
Gujarat 2022
Seat Projection
BJP 150 ± 11 (Plus / Minus 11) Seats
Cong+ 19 ± 9 (Plus / Minus 9) Seats
AAP 11 ± 7 (Plus / Minus 7) Seats
Others 2 ± 2 (Plus / Minus 2) Seats#News24TodaysChanakyaAnalysis @news24tvchannel
— Today's Chanakya (@TodaysChanakya) December 5, 2022
Advertisement
ಗುಜರಾತ್‌ನಲ್ಲಿ ಬಿಜೆಪಿ 150 ± 11, ಕಾಂಗ್ರೆಸ್ 19 ± 9, ಆಪ್ 11 ± 7, ಇತರರು 2 ± 2 ಗೆಲ್ಲಬಹುದು ಎಂದು ಹೇಳಿದೆ.
Advertisement
#TCPoll
Himachal 2022
Seat Projection
BJP 33 ± 7 (Plus / Minus 7) Seats
Cong 33 ± 7 (Plus / Minus 7) Seats
Others 2 ± 2 (Plus / Minus 2) Seats#News24TodaysChanakyaAnalysis
— Today's Chanakya (@TodaysChanakya) December 5, 2022
Advertisement
ಸತತ 22 ವರ್ಷಗಳ ಕಾಲ ಬಿಜೆಪಿ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. 1995 ರಿಂದ ನಡೆದ 6 ಚುನಾವಣೆಗಳಲ್ಲಿ ಕಮಲ ಅರಳುತ್ತಲೇ ಇದೆ. ಮೋದಿ ಪ್ರಧಾನಿಯಾದ ಬಳಿಕ ನಾಯಕತ್ವದ ಕೊರತೆ ಅನುಭವಿಸಿದರೂ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಕಡಿಮೆ ಮಾಡಿದ್ದು ಬಿಜೆಪಿಗೆ ನೆರವಾಗಿದೆ.
Advertisement
ಒಟ್ಟು 182 ಸ್ಥಾನಗಳಿದ್ದು ಬಹುಮತಕ್ಕೆ 92 ಸ್ಥಾನಗಳ ಅಗತ್ಯವಿದೆ. ಗುಜರಾತ್ ಚುನಾವಣೆಯ ಫಲಿತಾಂಶ ಡಿ.8 ರಂದು ಪ್ರಕಟವಾಗಲಿದೆ. ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಮೋದಿ ಪರ ಘೋಷ – ತಲೆಕೆಡಿಸಿಕೊಳ್ಳದೇ ಗಾಳಿಯಲ್ಲಿ ಮುತ್ತು ತೇಲಿಸಿದ ರಾಗಾ
All India Lok Sabha Tally 2019
BJP 300 ± 14 Seats
NDA 350 ± 14 Seats
Cong 55 ± 9 Seats
UPA 95 ± 9 Seats
Others 97 ± 11 Seats#News24TodaysChanakya
— Today's Chanakya (@TodaysChanakya) May 19, 2019
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 33 ± 7, ಕಾಂಗ್ರೆಸ್ 33 ± 7, ಇತರರು 2 ± 2 ಸ್ಥಾನ ಗೆಲ್ಲಲಿದೆ ಎಂದು ಟುಟೇಸ್ ಚಾಣಕ್ಯ ಹೇಳಿದೆ.
ಗುಜರಾತ್ ಚುನಾವಣೆಗೆ ಮುನ್ನ ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದಿತ್ತು. ನವೆಂಬರ್ 12 ರಂದು ಒಂದೇ ಹಂತದಲ್ಲಿ ಎಲ್ಲಾ 68 ಸ್ಥಾನಗಳಿಗೆ ಮತದಾನ ನಡೆದಿದ್ದು, ಶೇ. 75.6ರಷ್ಟು ಮತದಾನ ಆಗಿತ್ತು. ಸರಳ ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದ್ದು, ಫಲಿತಾಂಶ ಡಿ. 8 ಗುರುವಾರ ಪ್ರಕಟವಾಗಲಿದೆ.