LatestMain PostNational

ಜೋಡೋ ಯಾತ್ರೆ ವೇಳೆ ಮೋದಿ ಪರ ಘೋಷ – ತಲೆಕೆಡಿಸಿಕೊಳ್ಳದೇ ಗಾಳಿಯಲ್ಲಿ ಮುತ್ತು ತೇಲಿಸಿದ ರಾಗಾ

ಭೋಪಾಲ್: ರಾಹುಲ್ ಗಾಂಧಿ (Rahul Gandhi) ನೇತೃತ್ವ ಭಾರತ್ ಜೋಡೋ ಯಾತ್ರೆ (Bharat Jodo Yatra) ಇದೀಗ ರಾಜಸ್ಥಾನದಲ್ಲಿ (Rajasthan) ಸಂಚರಿಸುತ್ತಿದೆ. ಇಷ್ಟು ದಿನ ಯಾತ್ರೆ ನಡೆಸಿದಲ್ಲೆಲ್ಲಾ ಜನರ ಹೃದಯ ಗೆಲ್ಲುವಂತಹ ಕೆಲಸ ಮಾಡುತ್ತಾ ರಾಹುಲ್ ಗಾಂಧಿ ಸುದ್ದಿಯಲ್ಲಿದ್ದರು ಮಾತ್ರವಲ್ಲದೇ ಯಾತ್ರೆ ವೇಳೆ ಕಿಡಿಗೇಡಿಗಳ ದೇಶ ವಿರೋಧಿ ಘೋಷಣೆಗಳಿಂದ ವಿವಾದಕ್ಕೂ ಸಿಲುಕಿ ಹಾಕಿಕೊಂಡಿದ್ದರು.

ಜೋಡೋ ಯಾತ್ರೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪರ ಘೋಷಣೆ ಕೂಗಿದ್ದಕ್ಕೆ ರಾಗಾ ಯಾವುದಕ್ಕೂ ತಲೆಕೆಡಿಕೊಳ್ಳದೇ ಘೋಷಣೆ ಕೂಗಿದವರತ್ತ ಗಾಳಿಯಲ್ಲಿ ಸಿಹಿಮುತ್ತನ್ನು (Flying Kiss) ತೇಲಿ ಬಿಟ್ಟಿದ್ದಾರೆ. ಈ ವಿಚಾರಕ್ಕೆ ರಾಹುಲ್ ಮತ್ತೆ ಸುದ್ದಿಯಾಗಿದ್ದಾರೆ.

ಜೋಡೋ ಯಾತ್ರೆ ವೇಳೆ ಮೋದಿ ಪರ ಘೋಷ - ತಲೆಕೆಡಿಸಿಕೊಳ್ಳದೇ ಗಾಳಿಯಲ್ಲಿ ಮುತ್ತು ತೇಲಿಸಿದ ರಾಗಾ

ಭಾನುವಾರ ಯಾತ್ರೆ ಅಗರ್ ಮಾಲ್ವಾ ಜಿಲ್ಲೆ ಮೂಲಕ ಮಧ್ಯಪ್ರದೇಶದಿಂದ (Madhya Pradesh) ರಾಜಸ್ಥಾನದೆಡೆಗೆ ಸಾಗಿದೆ. ಈ ವೇಳೆ ಕೆಲವರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ರಾಗಾ ಘೋಷಣೆ ಕೇಳಿದತ್ತ ತಿರುಗಿ ಅವರತ್ತ ಕೈ ಬೀಸಿದ್ದಾರೆ. ತಮ್ಮೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿದ್ದ ನಾಯಕರಿಗೂ ರಾಹುಲ್ ಅವರತ್ತ ಕೈ ಬೀಸುವಂತೆ ತಿಳಿಸಿದ್ದಾರೆ. ಬಳಿಕ ರಾಹುಲ್ ಮೋದಿ ಘೋಷಣೆ ಕೂಗಿದವರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಇದನ್ನೂ ಓದಿ: ಮತದಾರ ಪಟ್ಟಿಯಿಂದ ಪಾಲಿಕೆ ನಿವೃತ್ತ ಆಯುಕ್ತರ ಹೆಸರೇ ಮಾಯ – ಬದುಕಿದ್ರೂ ಸತ್ತಿದ್ದಾರೆಂದು ದಾಖಲು

ಭಾರತ್ ಜೋಡೋ ಯಾತ್ರೆ ಸೋಮವಾರ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಸಾಗುತ್ತಿದೆ. ಝಾಲಾವರ್‌ನ ಝಲ್ರಾಪಟನ್‌ನಲ್ಲಿರುವ ಕಾಳಿ ತಲೈನಿಂದ ಯಾತ್ರೆ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಸಚಿವರು, ಶಾಸಕರು, ಇತರ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ರಾಹುಲ್ ಗಾಂಧಿಯೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ‌ಪ್ರಕಟ

Live Tv

Leave a Reply

Your email address will not be published. Required fields are marked *

Back to top button