Bengaluru City
ಕಾಂಗ್ರೆಸ್ ಕಚೇರಿ ಮುಂದೆ ಇಂದು ಬಿಜೆಪಿ ಪ್ರೊಟೆಸ್ಟ್

ಬೆಂಗಳೂರು: ಮಹದಾಯಿ ವಿಚಾರವಾಗಿ ಬಿಜೆಪಿ ಕಚೇರಿ ಮುಂದೆ ರೈತರು ಹೋರಾಟ ನಡೆಸ್ತಿದ್ರೆ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಮಹದಾಯಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ ಅಂತಾ ಆರೋಪಿಸಿ ಬಿಜೆಪಿ ಇಂದು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಮಾಜಿ ಡಿಸಿಎಂ ಆರ್.ಅಶೋಕ್, ಅರವಿಂದ್ ಲಿಂಬಾವಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬೆಂಗಳೂರು ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಆಯ್ತು ಬಿಡ್ರಪ್ಪ, ನನ್ನ ಕೈಯಿಂದ ಆಗೋದಿಲ್ಲ ನಿಮಗೆ ಹೇಳೋದಕ್ಕೆ ಬರ್ತೀನಿ : ಬಿಎಸ್‍ವೈ
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಗೋವಾದ ಸಿಎಂ ಮಹದಾಯಿ ಸಂಧಾನಕ್ಕೆ ಒಪ್ಪಿದ್ರು. ಗೋವಾದಲ್ಲಿನ ಕಾಂಗ್ರೆಸ್ ನಾಯಕರು ನೀರು ಬಿಡಲು ಒಪ್ಪುತ್ತಿಲ್ಲ ಅಂತಾ ಆರೋಪಿಸಿ ಕೆಪಿಸಿಸಿ ಕಚೇರಿ ಎದುರು ಬಿಜೆಪಿ ನಾಯಕರು ಧರಣಿ ನಡೆಸಲಿದ್ದಾರೆ.

ಬಿಜೆಪಿ ಕಚೇರಿ ಮುಂದೆ ಹೋರಾಟಗಾರರು ಐದನೇ ದಿನವೂ ಚಳಿ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಪಾದಯಾತ್ರೆ ಆರಂಭವಾಗಲಿದೆ, ರಾಜಭವನ, ಸಿಎಂ ನಿವಾಸ, ಜೆಡಿಎಸ್ ಕಚೇರಿ, ಚುನಾವಣಾ ಆಯೋಗದತ್ತ ಪಾದಯಾತ್ರೆ ತೆರಳಲಿದೆ.
ಇದನ್ನೂ ಓದಿ: ಬೆಳೆಯಲು ಪ್ರತಿಭೆ ಬಳಸಿ, ವಾಮಮಾರ್ಗ ಬೇಡ: ಚೇತನ್‍ಗೆ ಜಗ್ಗೇಶ್ ಟಾಂಗ್
