ವಿಜಯಪುರ: ಉತ್ತರ ಕರ್ನಾಟಕದ ನಾಯಕರಾದ ಎಚ್.ಕೆ. ಪಾಟೀಲ, ಎಂ.ಬಿ.ಪಾಟೀಲ ಸ್ವಾಭಿಮಾನಿಗಳು. ಅವರಂಥವರಿಗೂ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ. ಎಚ್. ಕೆ. ಪಾಟೀಲ ಸಿಎಂ ಆಗುವ ಅರ್ಹತೆ ಉಳ್ಳವರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಾಗಲಿ ಬಿಡಲಿ ಡಿ.22ರ ನಂತರ ಪತನ ಖಚಿತ ಎಂದು ಭವಿಷ್ಯ ನುಡಿದರು. ಅಲ್ಲದೇ ಸಿದ್ದರಾಮಯ್ಯ ಡಿ. 22ರ ಗಡುವು ನೀಡಿರುವುದು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಮೋಸ ಮಾಡುವ ತಂತ್ರವಷ್ಟೇ ಎಂದರು. ಇದನ್ನೂ ಓದಿ: ಏನ್ರೀ, ಅವ್ರನ್ನ ಕರೆದುಕೊಂಡು ಹೋಗೋದಕ್ಕೆ ತೀರ್ಮಾನ ಮಾಡಿದ್ದೀರಾ: ಈಶ್ವರಪ್ಪ ಕಾಲೆಳೆದ ಡಿಕೆಶಿ
Advertisement
Advertisement
ಇದೇ ವೇಳೆ ಎಚ್‍ಡಿಡಿ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಯತ್ನಾಳ್ ಅವರು, ದೇವೇಗೌಡರ ಮನೆತನ ಮುಹೂರ್ತ ನೋಡಿ ಕೆಲಸ ಮಾಡುತ್ತದೆ. ಅದ್ದರಿಂದ ಮುಂದೆ ಧನುರ್ಮಾಸ ಬರುವುದರಿಂದ ಬೆಳಗಾವಿ ಅಧಿವೇಶನವನ್ನು ಪಾರು ಮಾಡಲು ಯಜ್ಞ-ಯಾಗಾದಿಗಳನ್ನು ನಡೆಸುತ್ತಿದ್ದಾರೆ. ಎಚ್. ಡಿ. ಕುಮಾರಸ್ವಾಮಿ ಮಂಡ್ಯ, ಮೈಸೂರು, ರಾಮನಗರ, ಹಾಸನ, ತುಮಕೂರು, ಚಾಮರಾಜನಗರ, ಬೆಂಗಳೂರಿಗೆ ಮಾತ್ರ ಸಿಎಂ ಆಗಿದ್ದಾರೆ. ಉತ್ತರ ಕರ್ನಾಟಕವನ್ನು ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಸಿಎಂ ಹೇಳಿದಂತೆ ಈ ಭಾಗದ ಜನ ಮತ್ತು ರೈತರು ದಂಗೆ ಏಳಲಿದ್ದಾರೆಂದು ಎಚ್ಚರಿಕೆ ನೀಡಿದರು.
Advertisement
ಸಿಎಜಿ ವರದಿ ಕುರಿತು ಸಿಬಿಐ ತನಿಖೆಯಾಗಲಿ ಆಗ್ರಹಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv