ಬೆಳಗಾವಿಯಲ್ಲೂ ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಾಣ: ಅಭಯ್ ಪಾಟೀಲ್

Public TV
2 Min Read
Abhay Patil 4

ಬೆಳಗಾವಿ: ರಾಮದೇವ ಗಲ್ಲಿಯಲ್ಲಿ ಒಂದು ಪುರಾತನ ದೇವಾಲಯ ಇದೆ. ಆ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಿದ್ದಾರೆ. ಅದು ಮರಳಿ ದೇವಾಲಯ ಆಗಬೇಕು ಎಂಬುದು ಎಲ್ಲ ಹಿಂದೂಗಳ ಭಾವನೆಯಾಗಿದೆ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇಡೀ ದೇಶಾದ್ಯಂತ ಮಸೀದಿ-ದೇವಸ್ಥಾನಗಳ ವಿವಾದ ಬುಗಿಲೆದ್ದಿರುವ ಮಧ್ಯದಲ್ಲಿ ಶಾಸಕ ಅಭಯ್ ಪಾಟೀಲ್ ನಗರದಲ್ಲಿ ಪಬ್ಲಿಕ್‌ಟಿವಿ ಜೊತೆ ಮಾತನಾಡಿ, ಬೆಳಗಾವಿ ರಾಮದೇವ ಗಲ್ಲಿಯ ಹನುಮನ ಮಂದಿರದ ಪಕ್ಕದಲ್ಲಿಯೇ ಗುಡಿ ಇದೆ. ಇದರ ಬಗ್ಗೆ ಪೂರ್ಣವಾಗಿ ಪರಿಶೀಲನೆ ಮಾಡುತ್ತಿದ್ದೇನೆ. ಇನ್ನು ಕೆಲವೊಂದು ಮಾಹಿತಿಗಳು ಎರಡ್ಮೂರು ದಿನಗಳಲ್ಲಿ ಸಿಗಲಿದೆ. ಯಾವಾಗ ಅದನ್ನು ಕೆಡವಿ ಮಸೀದಿ ಮಾಡಿದ್ರು? ಅಲ್ಲಿ ಯಾವ ಗುಡಿ ಇತ್ತು? ಎನ್ನುವುದು ತಿಳಿಯಲಿದೆ. ಅಲ್ಲಿನ ಹಿರಿಯರು ಇದು ಪುರಾತನ ಮಂದಿರ ಎಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

Abhay Patil 1

ದೇವಸ್ಥಾನ ಸುಮಾರು ಐನೂರು ವರ್ಷದ ಹಿಂದಿನದು ಇರಬಹುದು. ಗರ್ಭಗುಡಿಗಳಿಗೆ ಬಾಗಿಲುಗಳಿವೆ. ಒಳಗೆ ಬಹಳಷ್ಟು ಚಿತ್ರಗಳನ್ನು ಕೆತ್ತಿ ತೆಗೆಯುವ ಕೆಲಸ ಆಗಿದೆ. ಹೊರಗಿನ ಒಂದು ಸೈಡ್ ನೋಡಿದರೆ ಅದು ಯಾವ ರೀತಿಯ ಕಟ್ಟಡವಾಗಿದೆ ಎಂದು ಗೊತ್ತಾಗುತ್ತದೆ. ಮಸೀದಿಯಲ್ಲಿ ಕಲ್ಲಿನ ಬಾಗಿಲುಗಳು, ಒಳಗೆ ದೊಡ್ಡ ಕಂಬಗಳಿವೆ. ಹಲಸಿ ಸೇರಿ ಬೇರೆ ದೇವಸ್ಥಾನಗಳಲ್ಲಿ ಇರುವ ಹಾಗೇ ಮಸೀದಿ ಒಳಗಡೆ ಕಂಬಗಳು ಇದ್ದಂತೆ ಮೇಲ್ನೋಟಕ್ಕೆ ಇಲ್ಲಿಯೂ ಕಾಣಿಸುತ್ತವೆ. ಹೀಗಾಗಿ ಜಿಲ್ಲಾಡಳಿತ ತ್ವರಿತವಾಗಿ ಪರಿಶೀಲನೆ ನಡೆಸಿ ಇತಿಹಾಸದಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:  ಎರಡು ವರ್ಷಗಳ ನಂತರ ಭಾರತ- ಬಾಂಗ್ಲಾ ರೈಲು ಸಂಚಾರ ಪುನಾರಂಭ

Abhay Patil 3

ಶಾಸಕನಾಗಿ ನಾನೇ ಒಳಗೆ ಹೋಗಿ ಪರಿಶೀಲನೆ ಮಾಡುತ್ತಿಲ್ಲ. ನಮ್ಮ ಗಮನಕ್ಕೆ ಬಂದಿರುವುದನ್ನು ತಿಳಿಸಿದ್ದೇನೆ. ಸರ್ವೇ ಮಾಡಿರಿ, ಇಲ್ಲವಾದರೆ ಇದನ್ನು ಜಿಲ್ಲಾಡಳಿತ ಸಾಬೀತು ಮಾಡಬೇಕು. ಮೇಲ್ನೋಟಕ್ಕೆ ನೂರಕ್ಕೆ ನೂರರಷ್ಟು ಇದು ಮಂದಿರವಾಗಿದೆ. ಸರ್ವೇ ಆದ ನಂತರ ಸತ್ಯಾಂಶ ತಿಳಿಯಲಿದೆ. ಬೆಳಗಾವಿಯಲ್ಲಿ ಅನೇಕ ಪೂಜಾಕೇಂದ್ರಗಳು, ಶ್ರದ್ಧಾ ಕೇಂದ್ರಗಳಿವೆ, ಅವುಗಳನ್ನು ಸರ್ವೇ ಮಾಡಿ ಎಂದು ನಾವು ಹೇಳುತ್ತಿಲ್ಲ. ಅದೇ ರೀತಿ ಜನರು ಇನ್ನು ಎರಡು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಸ್ವತಃ ನಾನೇ ಗಮನಿಸಿದ ನಂತರ ಅವುಗಳನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.

Abhay Patil 2

ಸರ್ವೇ ಆದ ನಂತರ ನೂರಕ್ಕೆ ನೂರು ಅದು ದೇವಸ್ಥಾನ ಎನ್ನುವುದು ಖಚಿತವಾಗುತ್ತದೆ. ಅದಾದ ಬಳಿಕ ಮರಳಿ ದೇವಸ್ಥಾನ ಪುನರ್ ಸ್ಥಾಪನೆ ಆಗಬೇಕು. ಪಕ್ಕದಲ್ಲಿಯೇ ಆಂಜನೇಯ ದೇವಸ್ಥಾನವಿದೆ. ಅದು ಯಾವ ದೇವಸ್ಥಾನ ಎಂಬ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇವೆ. ಅಲ್ಲಿನ ಜನರು ಹೇಳಿದಂತೆ ನಾನು ಹೊರಗೆ ಹೋಗಿ ನೋಡಿ ಬಂದಿದ್ದೇನೆ. 80-90 ವರ್ಷದವರು ಹೇಳುತ್ತಿರುವುದು ನೂರಕ್ಕೆ ನೂರು ನಿಜವಾಗಿದೆ. ನಾವು ಮಂದಿರ ಇತ್ತು ಎಂದು ಹೇಳಿದ್ದೇವೆ. ಅದನ್ನು ಜಿಲ್ಲಾಡಳಿತ ಸರ್ವೇ ಮಾಡಿ ಹೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಲ ವಿವಾದ ಬಗೆಹರಿಸಲು ಪಾಕಿಸ್ತಾನದ ನಿಯೋಗ ಭಾರತಕ್ಕೆ ಭೇಟಿ

ಮಸೀದಿ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ವಿಷಯ ತಿಳಿಸುತ್ತೇನೆ. ಒಂದು ವಾರದಲ್ಲಿ ಏನೂ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಿಳಿಸುತ್ತೇವೆ. ಆಗಲೂ ಆಗದಿದ್ದರೆ ಸಮಾಜದ ಎಲ್ಲ ಬಾಂಧವರು, ಪಕ್ಷದ ಪ್ರಮುಖರ ಜೊತೆಗೆ ಚರ್ಚಿಸಿ ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *