ನವದೆಹಲಿ: ಕೊರೊನಾದಿಂದಾಗಿ ಎರಡು ವರ್ಷಗಳಿಗೂ ಅಧಿಕ ಕಾಲ ಸ್ಥಗಿತಗೊಂಡಿದ್ದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪ್ರಯಾಣಿಕ ರೈಲು ಸೇವೆಗಳು ಇಂದಿನಿಂದ ಪುನಾರಂಭಗೊಂಡಿದೆ.
ಭಾರತ ಮತ್ತು ಬಾಂಗ್ಲಾದೇಶದ ಪ್ರಯಾಣಿಕರ ಅನುಕೂಲಕ್ಕಾಗಿ ಕೋಲ್ಕತ್ತಾ, ಢಾಕಾ, ಕೋಲ್ಕತ್ತಾ ಮೈತ್ರಿ ಎಕ್ಸ್‌ಪ್ರೆಸ್ ಮತ್ತು ಕೋಲ್ಕತ್ತಾ, ಖುಲ್ನಾ, ಕೋಲ್ಕತ್ತಾ ಬಂಧನ್ ಎಕ್ಸ್‌ಪ್ರೆಸ್‍ಗಳು ಇಂದಿನಿಂದ ಸೇವೆಗಳನ್ನು ಪುನಾರಂಭವಾಗಿದೆ ಎಂದು ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲಬ್ಯ ಚಕ್ರವರ್ತಿ ತಿಳಿಸಿದರು.
Advertisement
Advertisement
ಈ ಕ್ರಮವು ಭಾರತ ಮತ್ತು ಬಾಂಗ್ಲಾದೇಶ ಎರಡರಲ್ಲೂ ಪ್ರಯಾಣಿಕರ ಅನುಕೂಲಕ್ಕಾಗಿ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: ನೆರೆಮನೆಯವನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ- ಬಾಲಕಿ ಆತ್ಮಹತ್ಯೆ
Advertisement
ಭಾರತ-ಬಾಂಗ್ಲಾದೇಶಕ್ಕೆ ತಲುಪುವ ಮೂರನೇ ರೈಲು ಸೇವೆಯಾದ ಮಿತಾಲಿ ಎಕ್ಸ್‌ಪ್ರೆಸ್ ಸೇವೆಯೂ ಜೂನ್ 1ರಂದು ಢಾಕಾದಿಂದ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರೈಲಿನ ಟಿಕೆಟ್ ಎಲ್ಲವೂ ಮಾರಾಟವಾಗಿದೆ. ಇದನ್ನೂ ಓದಿ: ಜಲ ವಿವಾದ ಬಗೆಹರಿಸಲು ಪಾಕಿಸ್ತಾನದ ನಿಯೋಗ ಭಾರತಕ್ಕೆ ಭೇಟಿ