ಬೆಂಗಳೂರು: ಮುಸ್ಲಿಂ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ, ಈ ಥರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರದಿಂದ ವಾಪಸ್ ಪಡೆದಿರುವ ಬಗ್ಗೆ ಸಿಎಂ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್ ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ವಿವಾದದ ಬಳಿಕ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ ಸಿಎ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ
ಮುಸ್ಲಿಂ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸರ್ಕಾರದ ಈ ನಡೆ ಪೊಲೀಸರ ಸ್ಥೈರ್ಯ ಕುಂದಿಸುವ ಕೆಲಸ. ಪೊಲೀಸರಿಗೇ ಈಗ ಅನಿಸಿಬಿಟ್ಟಿದೆ, ಈ ಸಮುದಾಯದವರ ಮೇಲೆ ದೂರು ದಾಖಲಿಸಬಾರದು ಅಂತ. ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರಚೋದನೆ ಕೊಡ್ತಿದೆ. ಇದರ ಬಗ್ಗೆ ಬಿಜೆಪಿಯಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡ್ತೇವೆ. ಈಗಾಗಲೇ ರಾಜ್ಯದಲ್ಲಿ ಪಾಕ್, ಬಾಂಗ್ಲಾದಿಂದ ಅಕ್ರಮವಾಗಿ ಬಂದಿರುವವರನ್ನು ಬಂಧಿಸಿದ್ದಾರೆ. ಇವರ ಮೇಲಿನ ಕೇಸ್‌ಗಳನ್ನೂ ವಾಪಸ್ ಪಡೆದುಕೊಳ್ಳಿ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ, ಈ ಥರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಲೇವಡಿ ಮಾಡಿದ್ದಾರೆ.
ಇನ್ನೂ ತೆರಿಗೆ ಪಾಲಿನಲ್ಲಿ ತಾರತಮ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದುವರೆಗೆ ಕೇಂದ್ರದಿಂದ ಕೊಟ್ಟ ಹಣವನ್ನು ಈ ಸರ್ಕಾರ ಲೂಟಿ ಹೊಡೆದಿದೆ. ಮುಡಾ, ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆಯಲಾಗಿದೆ. ಕೇಂದ್ರದಿಂದ ತಾರತಮ್ಯ ಆಗಿಲ್ಲ, ಈ ಹಿಂದೆಯೇ ನಾವು ಅಂಕಿಅಂಶ ಬಿಡುಗಡೆ ಮಾಡಿದ್ದೇವೆ. ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಬರ್ತಿತ್ತು? ಮೋದಿ ಕಾಲದಲ್ಲಿ ಎಷ್ಟು ಬಂದಿದೆ ನೋಡಲಿ. ಮೆಟ್ರೋ, ಹೈವೇ, ರೈಲು, ಬೆಂಗಳೂರು ಅಭಿವೃದ್ಧಿಗೆ ಇತ್ಯಾದಿಗಳಿಗೆ ಎಷ್ಟು ಬಂದಿದೆ ಹೇಳಿ? ಮೆಟ್ರೋಗೆ ಎಷ್ಟು ಬಂದಿದೆ ಅಂತ ಸಿದ್ದರಾಮಯ್ಯ ಹೇಳೋದೇ ಇಲ್ಲ. ಬಂದ ಹಣ ಎಲ್ಲ ಲೂಟಿ ಹೊಡೀತಾರೆ. ಜಲಜೀವನ್ ಮಿಷನ್‌ಗೆ ಎಷ್ಟು ಬಂದಿದೆ, ಲೆಕ್ಕ ಕೊಡಿ. ಎಲ್ಲ ಲೆಕ್ಕ ಕೊಡಿ, ಜನ ತೀರ್ಮಾನ ಮಾಡ್ತಾರೆ ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಉಗ್ರಗಾಮಿ ಪಕ್ಷ ಎಂಬ ತಂದೆ ಮಾತು ಸಮರ್ಥನೆ ಮಾಡಿಕೊಂಡ ಪುತ್ರ ಪ್ರಿಯಾಂಕ್ ಖರ್ಗೆ
ಮುಡಾ, ವಾಲ್ಮೀಕಿ ಹಗರಣಗಳನ್ನು ಡೈವರ್ಟ್ ಮಾಡಲು ಈಥರ ಆರೋಪ ಮಾಡ್ತಿದ್ದಾರೆ. ಜಿಎಸ್‌ಟಿ ಸಭೆಗೆ ಹೋದಾಗ ಏನ್ ಕಡಲೆ ಕಾಯಿ ತಿಂತೀರಾ? ರಾಜ್ಯದಿಂದ ಆಯ್ಕೆಯಾದ ಕಾಂಗ್ರೆಸ್ ಸಂಸದರು, ಖರ್ಗೆಯವರು ಇದುವರೆಗೆ ಸಂಸತ್, ರಾಜ್ಯಸಭೆಯಲ್ಲಿ ಇದರ ಬಗ್ಗೆ ಯಾಕೆ ಮಾತಾಡಿಲ್ಲ? ವೋಟ್ ಪಾಲಿಟಿಕಗ್ಸ್‌ಗಾಗಿ ಇಲ್ಲಿ ಮಾತಾಡ್ತೀರ, ಅಲ್ಲೂ ಮಾತಾಡಿ, ಯಾಕೆ ಅಲ್ಲಿ ಬಾಯಿ ಬಿಡಲ್ಲ? ನಿಮ್ಮ ಲೂಟಿತನ ಜನಕ್ಕೆ ಗೊತ್ತಾಗಿ ಹೋಗಿದೆ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಂಪಿಗಳಿಗೆ ಮೋದಿ, ಅಮಿತ್ ಶಾ ಕಂಡ್ರೆ ಭಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕೇಂದ್ರ ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡ್ತಿದೆ ಅಂತಾರಲ್ಲ, ಇಲ್ಲಿ ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳಿಗೂ ಸಮನಾದ ಅನುದಾನ ಕೊಡ್ತಿದ್ದಾರಾ? ನೀವು ಇಲ್ಲಿ ತಾರತಮ್ಯ ಮಾಡಿ, ಕೇಂದ್ರದಲ್ಲಿ ತಾರತಮ್ಯ ಆಗಿದೆ ಅನ್ನೋದು ಎಷ್ಟು ಸರಿ? ಕರ್ನಾಕದಲ್ಲಿ ನೀವು ಅನುದಾನ ತಾರತಮ್ಯ ಮಾಡಿಲ್ಲ ಅಂದ್ರೆ ನಾವು ಕೇಳ್ತೀವಿ. ಮೊದಲು ನೀವು ಇಲ್ಲಿ ತಾರತಮ್ಯ ಸರಿಪಡಿಸಿ. ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನವನ್ನು ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಹಂಚಿಕೆ ಮಾಡುತ್ತಿದೆ. ಈ ನೀತಿಯನ್ನು ಮಾಡಿದವರು ಮನಮೋಹನಗ್ ಸಿಂಗ್ ಅವರೇ, ಸಿಂಗ್ ಅವರು ಮಾಡಿರುವ ನೀತಿಯನ್ವಯವೇ ರಾಜ್ಯಗಳಿಗೆ ತೆರಿಗೆ ಪಾಲು ಬರ್ತಿದೆ. ಇಲ್ಲೂ ಎಲ್ಲಾ ಕ್ಷೇತ್ರಗಳು, ಜಿಲ್ಲೆಗಳಿಗೆ ತಾರತಮ್ಯ ಮಾಡ್ತಿಲ್ಲ ಅಂತ ತೋರಿಸಿ. ನಿಮ್ಮನೆ ದೋಸೆಯೇ ತೂತು, ಕೇಂದ್ರದ ದೋಸೆ ಬಗ್ಗೆ ಮಾತಾಡುವ ಹಕ್ಕಿಲ್ಲ ನಿಮಗೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಸ್ವಪಕ್ಷದ ವಿರುದ್ದವೇ ಕಾಂಗ್ರೆಸ್ ಶಾಸಕ ರಾಜುಕಾಗೆ ಅಸಮಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್ ಶಾಸಕರಿಗೆ ಅರ್ಜಿ ಕೊಟ್ಟು ಕೊಟ್ಟು ಸಾಕಾಗಿದೆ. ರಾಜು ಕಾಗೆ ಹೇಳಿದಂತೆ ಕಾಂಗ್ರೆಸ್ ಶಾಸಕರಿಗೆ ಆತ್ಮಹತ್ಯೆಯೊಂದೇ ದಾರಿ. ಕಾಂಗ್ರೆಸ್ ಶಾಸಕರ ಪಾಡೇ ಹೀಗಾದರೆ ವಿಪಕ್ಷ ಶಾಸಕರ ಗತಿ ಏನು..? ನಮಗಂತೂ ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ. ನಾವು ಪ್ರಶ್ನೆ ಮಾಡಿದ್ರೆ ಗ್ಯಾರಂಟಿ ಕೊಟ್ಟಿಲ್ವೇನ್ರಿ ಅಂತಾರೆ. ಫ್ರೀ ಗ್ಯಾರಂಟಿ ತಗೊಂಡು ರಸ್ತೆ, ಸ್ಕೂಲ್ ಮಾಡೋಕಾಗುತ್ತಾ..? ಕಾಂಗ್ರೆಸ್‌ನಲ್ಲಿ ಮಂತ್ರಿಗಳು ಗೌರವ ಕಳೆದುಕೊಂಡಿದ್ದಾರೆ. ಡಿಕೆಶಿ ಅವ್ರು ಹೇಳ್ತಾರೆ, ಗ್ಯಾರಂಟಿ ಹಣದಿಂದ ಫ್ರಿಡ್ಜ್ ತಗೊಂಡ್ರು ಅಂತ ಏನ್ ಚಂದ್ರ ಲೋಕದಿಂದ ಇಂಪೋರ್ಟ್ ಮಾಡಿರೋ ವಸ್ತುನಾ ಅದು? ಇವ್ರು ಗ್ಯಾರಂಟಿ ಕೊಡೋದಕ್ಕೆ ಮೊದಲಿನಿಂದಲೂ ಜನರ ಬಳಿ ಫ್ರಿಡ್ಜ್, ಟಿವಿ ಇತ್ತು ಎಂದು ಕುಟುಕಿದ್ದಾರೆ.