ಬೆಂಗಳೂರು: ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಸಂಬಂಧ ಡೆತ್ ನೋಟ್ ಇದೀಗ ಹೊರಬಂದಿದೆ. ಡೆತ್ ನೋಟ್ ಮೇಲೆ ರೇಖಾ ಅರೆಸ್ಟ್ ಬಳಿಕ ಸುಮಾ ರೋಲ್ ಬಗ್ಗೆಯೂ ಸಾಕಷ್ಟು ಆಡಿಯೊಗಳು ಹೊರಬಂದಿದ್ದವು. ಇದೀಗ ಡೆತ್ ನೋಟ್ ನ ಅಸಲಿ ಪ್ರತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
ಡೆತ್ನೋಟ್ನಲ್ಲಿ ಏನಿದೆ..?
ಪ್ರಿಯ ಪತ್ನಿ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ. ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವೀಡಿಯೊಗಳ ಟ್ರ್ಯಾಪ್ ಗೆ ಸಿಲುಕಿದ್ದೆ. ಬ್ಲ್ಯಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ಮಕ್ಕಳನ್ನ ಚೆನ್ನಾಗಿ ನೋಡಿಕೋ. ಇಂತಿ ನಿನ್ನ ಮೋಸಗಾರ ಎಂದು ಹೇಳಿದ್ದಾರೆ. ಅಲ್ಲದೆ ಇನ್ಸ್ ಪೆಕ್ಟರ್ ನನಗೆ ಕಿರುಕುಳ ನೀಡಿ ಬ್ಲ್ಯಾಕ್ ಮೇಲ್ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತ ಪತ್ರದಲ್ಲಿ ಅನಂತ್ ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ
Advertisement
Advertisement
ಇನ್ಸ್ ಪೆಕ್ಟರ್ ಬರೆದ ಡೆತ್ ನೋಟ್ ಕೂಡ ವೈರಲ್ ಆಗಿದೆ. ಇದೇ ಡೆತ್ ನೋಟ್ ಗಳ ಮೇಲೆ ಅನಂತ್ ರಾಜು ಪತ್ನಿ ಸುಮಾ ದೂರು ನೀಡಿದ್ದರು. ಎಫ್ಐಆರ್ ದಾಖಲಿಸಿದ್ದ ಪೊಲೀಸರು ರೇಖಾಳನ್ನ ಬ್ಲಾಕ್ ಮೇಲ್ ಮತ್ತು ಹನಿಟ್ರ್ಯಾಪ್ ನಡಿ ಬಂಧಿಸಿದ್ರು. ಯಾವಾಗ ರೇಖಾ ಬಂಧನವಾಯಿತೋ ಅವಾಗ ರೇಖಾ, ತನ್ನ ಬಳಿಯಿದ್ದ ಸುಮಾ ಜೊತೆ ಮಾತನಾಡಿದ್ದ ಆಡಿಯೋ ಹೊರಗೆ ಬಿಟ್ಟಿದ್ರು. ಇದ್ರಲ್ಲಿ ಸುಮಾ ಕಿರುಕುಳ ಕೊಡುತ್ತಿದ್ದರ ಬಗ್ಗೆ ಗೊತ್ತಾಗಿತ್ತು. ಹನಿಟ್ರ್ಯಾಪ್ ಮಾಡೋದಾಗಿದ್ರೆ 6 ವರ್ಷ ಜೊತೆಯಲ್ಲಿ ಇರಬೇಕಿರಲಿಲ್ಲ ಅಂತಾ ಕೂಡ ರೇಖಾ ಹೇಳಿದ್ರು. ಈ ಹಿಂದೆ ಸ್ಯೂಸೈಡ್ ಅಟೆಂಪ್ಟ್ ಮಾಡಿದ್ದಾಗ ಬರೆಸಿಟ್ಟುಕೊಂಡಿರುವ ಡೆತ್ ನೋಟ್ ಅಂತಾ ರೇಖಾ ಆರೋಪಿಸುತ್ತಿದ್ದಾರೆ.