ಗಾಂಧೀನಗರ: ಬಿಜೆಪಿ(BJP) ತನ್ನ ಅಧಿಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಬದಲಿಸುತ್ತಲೇ ಇದೆ. ಕಾಂಗ್ರೆಸ್(Congress)ನ ಕಾಲ ಮುಗಿದೇ ಹೋಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ವ್ಯಂಗ್ಯವಾಡಿದ್ದಾರೆ.
ಗುಜರಾತ್(Gujarat) ಭೇಟಿಯಲ್ಲಿರುವ ಕೇಜ್ರಿವಾಲ್, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿದೆ. ಇದಕ್ಕೆ ಕರ್ನಾಟಕ, ಉತ್ತರಾಖಂಡ, ತ್ರಿಪುರಾ ರಾಜ್ಯಗಳೇ ಸಾಕ್ಷಿ. ಇದು ಆ ರಾಜ್ಯಗಳಲ್ಲಿ ಎಎಪಿ ಹೆಗ್ಗುರುತನ್ನು ಸ್ಥಾಪಿಸುವುದಕ್ಕೆ ತಡೆಯೊಡ್ಡುವ ಹುನ್ನಾರ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ನೀವು ಹಿಂದೂ ಆಗಿರುವವರೆಗೂ ಅಸ್ಪೃಶ್ಯರಾಗಿರುತ್ತೀರಾ – ಡಿಎಂಕೆ ಸಂಸದನ ವಿರುದ್ಧ ಬಿಜೆಪಿ ಕಿಡಿ
ಇದರ ಬೆನ್ನಲ್ಲೇ ಕಾಂಗ್ರೆಸ್ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ಅವರ ಕಾಲ ಮುಗಿದಿದೆ, ಅವರ ಬಗ್ಗೆ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ ಎಂದು ಹೇಳಿದರು.
ಆಡಳಿತಾರೂಢ ಬಿಜೆಪಿ ಸೋನಿಯಾ ಗಾಂಧಿ ಅವರನ್ನು ಬೇರೆಯೆ ದಾರಿಯ ಮೂಲಕ ಪ್ರಧಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಇದನ್ನೂ ಓದಿ: ಪುಂಡು ಪೋಕರಿಯಂತೆ ಮಾತಾಡಿದ್ರೆ ಗೌರವ ಉಳಿಯಲ್ಲ- ಸಿಟಿ ರವಿ ವಿರುದ್ಧ ದಿನೇಶ್ ಕಿಡಿ