LatestMain PostNational

ನೀವು ಹಿಂದೂ ಆಗಿರುವವರೆಗೂ ಅಸ್ಪೃಶ್ಯರಾಗಿರುತ್ತೀರಾ – ಡಿಎಂಕೆ ಸಂಸದನ ಹೇಳಿಕೆಗೆ ಬಿಜೆಪಿ ಕಿಡಿ

ಚೆನ್ನೈ: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಡಿಎಂಕೆ ಸಂಸದ ಎ ರಾಜಾ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್ ಮಾಡಿದ್ದು, ಇವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 100 ಕಿಲೋಮೀಟರ್ ಕ್ರಮಿಸಿದ ಭಾರತ್ ಜೋಡೋ ಯಾತ್ರೆ – 7ನೇ ದಿನ ಮುಂದುವರಿದ ರಾಗಾ ಪಾದಯಾತ್ರೆ

ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಹೀಗಿರುವುದಕ್ಕೆ ಕ್ಷಮಿಸಿ. ಅರಿವಾಲಯಂ ಸಂಸದರು ಇತರರನ್ನು ಓಲೈಸುವ ಉದ್ದೇಶದಿಂದ ಮತ್ತೊಂದು ಸಮುದಾಯದ ದ್ವೇಷವನ್ನು ಬಿತ್ತರಿಸುತ್ತಿದ್ದಾರೆ. ತಮಿಳುನಾಡು ತಮ್ಮದೇ ಎಂದು ಭಾವಿಸುವ ಈ ರಾಜಕೀಯ ನಾಯಕರ ಮನಸ್ಥಿತಿ ಅತ್ಯಂತ ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ದಾಳಿ ನಡೆಸುವ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಅನುಮತಿಗೆ ಕೇರಳ ಸರ್ಕಾರ ನಿರ್ಧಾರ

ಕಳೆದ ವಾರ ತಮಿಳುನಾಡಿನ ನಾಮಕ್ಕಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎ ರಾಜಾ ಅವರು, ಹಿಂದೂಗಳ ನಂಬಿಕೆ ಹಾಗೂ ಜಾತಿ ಪದ್ಧತಿಯ ವಿಚಾರವಾಗಿ ಮಾತನಾಡಿದ್ದರು. ಈ ವೇಳೆ ವರ್ಣ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದ ಶೂದ್ರರು, ವೇಶ್ಯೆಯರ ಮಕ್ಕಳು, ಹಿಂದೂ ಧರ್ಮದ ಆಚರಣೆಗಳನ್ನು ಮಾಡುವುದರಿಂದ ಅವರು ಹಿಂದೂಗಳಾಗಿಯೇ ಉಳಿಯುತ್ತಾರೆ.

ಹಿಂದೂ ಆಗಿರುವವರೆಗೂ ನೀನು ಶೂದ್ರ. ಶೂದ್ರನಾಗಿರುವವರೆಗೂ ನೀನು ವೇಶ್ಯೆಯ ಮಗ. ನೀನು ಹಿಂದೂ ಆಗಿರುವವರೆಗೂ ದಲಿತರು ಮತ್ತು ನೀನು ಹಿಂದೂ ಆಗಿರುವವರೆಗೆ ಅಸ್ಪೃಶ್ಯ ಎಂದು ಹೇಳಿದ್ದರು. ನೀವು ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಆಗಿಲ್ಲದಿದ್ದರೆ, ಹಿಂದೂ ಆಗಿರುತ್ತೀರಾ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಇಂತಹ ದುಷ್ಕೃತ್ಯವನ್ನು ಬೇರೆ ಯಾವುದೇ ದೇಶದಲ್ಲಿ ನೋಡಿದ್ದೀರಾ ಎಂದು ಟೀಕಿಸಿದ್ದಾರೆ.

Live Tv

Leave a Reply

Your email address will not be published.

Back to top button