ನವದೆಹಲಿ: ಆಡಳಿತಾರೂಢ ಬಿಜೆಪಿಯು (BJP) 2022-23ರ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ (Electoral Bonds) ಮೂಲಕ ಸರಿ ಸುಮಾರು 1,300 ಕೋಟಿ ರೂ.ಗಳನ್ನ ಸ್ವೀಕರಿಸಿದ್ದು, ಇದು ಕಾಂಗ್ರೆಸ್‌ಗಿಂತಲೂ 7 ಪಟ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗಕ್ಕೆ (Election Commission) ಸಲ್ಲಿಸಿದ ಪಕ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
2021-2022ರಲ್ಲಿ ಪಕ್ಷದ ಒಟ್ಟು ಕೊಡುಗೆಗಳು 1,775 ಕೋಟಿ ರೂ.ಗಳಷ್ಟಿತ್ತು, 2022-23ರ ಹಣಕಾಸು ವರ್ಷದಲ್ಲಿ ಆಡಳಿತಾರೂಢ ಬಿಜೆಪಿಯ ಒಟ್ಟು ಕೊಡುಗೆಗಳು 2,120 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಶೇ.61 ರಷ್ಟು ಚುನಾವಣಾ ಬಾಂಡ್‌ಗಳಿಂದಲೇ ಬಂದಿದೆ. ಅಲ್ಲದೇ 2021-22ರಲ್ಲಿ ಬಡ್ಡಿಯಿಂದ 135 ಕೋಟಿ ರೂ.ಗಳಷ್ಟಿದ್ದ ಬಿಜೆಪಿ 2022-23 ಬಡ್ಡಿಯಿಂದ 237 ಕೋಟಿ ರೂ. ಗಳಿಸಿದೆ ಎಂದು ಪಕ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
2021-22ರ ಅವಧಿಯ ಹಣಕಾಸು ವರ್ಷದಲ್ಲಿ ಒಟ್ಟು ಆದಾಯ 1,917 ಕೋಟಿ ರೂ.ಗಳಷ್ಟಿತ್ತು. ಆದ್ರೆ 2022-23ರ ಅವಧಿಗೆ ಪಕ್ಷದ ಒಟ್ಟು ಆದಾಯವು 2,360.8 ಕೋಟಿ ರೂ.ಗಳಷ್ಟಾಗಿದೆ. ಆದ್ರೆ 2011-22ರ ಅವಧಿಯಲ್ಲಿ 236 ಕೋಟಿ ರೂ. ಗಳಿಸಿದ್ದ ಕಾಂಗ್ರೆಸ್ 2022-23ರ ಅವಧಿಯಲ್ಲಿ 171 ಕೋಟಿ ರೂ.ಗಳಷ್ಟೇ ಗಳಿಸಿದೆ. ಇದನ್ನೂ ಓದಿ: ರೋಹಿತ್, ಗಿಲ್ ಅಲ್ಲ; ಟೀಂ ಇಂಡಿಯಾದ ಈ ಆಟಗಾರ ಇಂಗ್ಲೆಂಡ್‌ಗೆ ಸಮಸ್ಯೆ – ಮೈಕೆಲ್ ವಾನ್
Advertisement
ಇನ್ನು ರಾಜ್ಯಪಕ್ಷವಾಗಿ ಮಾನ್ಯತೆ ಪಡೆದ ಸಮಾಜವಾದಿ ಪಕ್ಷವು 2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 3.2 ಕೋಟಿ ರೂ.ಗಳಷ್ಟಿತ್ತು. 2022-23ರಲ್ಲಿ 2022-23 ರಲ್ಲಿ, ಇದು ಈ ಬಾಂಡ್‌ಗಳಿಂದ ಯಾವುದೇ ಕೊಡುಗೆಗಳನ್ನು ಸ್ವೀಕರಿಸಲಿಲ್ಲ. ಟಿಡಿಪಿಯು 2022-23ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 34 ಕೋಟಿ ರೂ. ಗಳಿಸಿದ್ದು, ಹಿಂದಿನ ಹಣಕಾಸು ವರ್ಷಕ್ಕಿಂತ 10 ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ಐಸಿಎಂಆರ್ ಒಪ್ಪಿಗೆ ಸೂಚಿಸಿದೆ: ದಿನೇಶ್ ಗುಂಡೂರಾವ್
Advertisement
ಚುನಾವಣೆ ಮತ್ತು ಸಾಮಾನ್ಯ ಪ್ರಚಾರದ ಒಟ್ಟು ವೆಚ್ಚದಲ್ಲಿ ಬಿಜೆಪಿಯು ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಬಳಕೆಗೆ 78.2 ಕೋಟಿ ರೂ. ಪಾವತಿಸಿದೆ. 2021-22ರಲ್ಲಿ 117.4 ಕೋಟಿ ರೂ. ಪಾವತಿಸಿತ್ತು. ಪಕ್ಷದ ಅಭ್ಯರ್ಥಿಗಳಿಗೆ 76.5 ಕೋಟಿ ರೂ. ಹಣಕಾಸಿನ ನೆರವು ನೀಡಿದ್ದು, 2021-22ರಲ್ಲಿ 146.4 ಕೋಟಿ ರೂ. ಪಾವತಿಸಿತ್ತು. ಇದನ್ನೂ ಓದಿ: ಕಾಂಗ್ರೆಸ್ ಹುಳುಕುಗಳು ಶ್ವೇತಪತ್ರದಲ್ಲಿ ಬಯಲು; ಯುಪಿಎ ಅವಧಿ ಕಿಕ್‌ಬ್ಯಾಕ್, ಹಗರಣಗಳ ಕಾಲ: ಅಶ್ವಥ್ ನಾರಾಯಣ್