ChikkaballapurDistrictsKarnatakaLatestMain Post

ನನ್ನನ್ನು ಕಂಡ್ರೆ ಬಿಜೆಪಿಯವರಿಗೆ ಭಯವೋ ಭಯ: ಸಿದ್ದರಾಮಯ್ಯ

Advertisements

ಚಿಕ್ಕಬಳ್ಳಾಪುರ: ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯವೋ ಭಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಸ್ಯವಾಡಿದ್ದಾರೆ.

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಕ್ಕೆ ಆಗಮಿಸಿ, ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಬಿಜೆಪಿಯವರು ಸ್ವಾತಂತ್ರ‍್ಯದ ಫಲಾನುಭವಿಗಳು ಅಷ್ಟೇ. ಬಿಜೆಪಿಯವರು ತಿರಂಗ ಧ್ವಜವನ್ನೇ ವಿರೋಧಿಸಿದ್ದರು. ಅದರೆ ಈಗ ಹರ್ ಘರ್ ತಿರಂಗ ಅಂತ ನಾಟಕವಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸ್ವಾತಂತ್ರ‍್ಯ ಪಡೆಯಲು ಆನೇಕ ನಾಯಕರು ಪ್ರಾಣ ಬಲಿದಾನ ಮಾಡಿದ್ದರು. ನಾವೆಲ್ಲಾ ಸ್ವಾತಂತ್ರ‍್ಯ ಬಂದ ಮೇಲೆ ಹುಟ್ಟಿರುವವರು. ಸ್ವಾತಂತ್ರ‍್ಯ ಬರಲು ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿ ಜೆಡಿಎಸ್ ಕಾರಣ ಅಲ್ಲ. ಕಾಂಗ್ರೆಸ್ ಹೋರಾಟ ಮಾಡಬೇಕಾದರೆ ಬಿಜೆಪಿ, ಆರ್‌ಎಸ್‌ಎಸ್‌ನವರು ಬ್ರಿಟಿಷರ ಜೊತೆ ಶಾಮೀಲಾಗಿದ್ದರು. ಸ್ವಾತಂತ್ರ‍್ಯ ಹೋರಾಟಗಾರರು ಜೈಲಿಗೆ ಹೋಗಲು ಅವರೇ ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಈ ದೇಶದ ರಾಷ್ಟ್ರಗೀತೆ, ರಾಷ್ಟ್ರ ಬಾವುಟ, ಸಂವಿಧಾನ ಮಾಡಿದ್ದು ಕಾಂಗ್ರೆಸ್. ಬಿಜೆಪಿ, ಜೆಡಿಎಸ್‌ನವರು ಅಲ್ಲ ಎಂದರು. ಇದನ್ನೂ ಓದಿ: ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ

ಕಾಂಗ್ರೆಸ್‌ನವರು ಸ್ವಾತಂತ್ರ‍್ಯ ತಂದುಕೊಟ್ಟಿದ್ದೀವಿ. ಉಳಿಸಿಕೋಳ್ಳಬೇಕಾ, ಬೇಡವಾ? ಸಂವಿಧಾನ ಉಳಿಯಬೇಕಾ ಬೇಡವಾ? ಉಳಿಯಬೇಕಾದರೆ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಈಗ ಹರ್ ಘರ್ ತಿರಂಗ ಎಂದು ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ರಾಷ್ಟ್ರಧ್ವಜ ಮಾಡುವಾಗ ವಿರೋಧ ಮಾಡಿದ ಬಿಜೆಪಿಯವರು ಈಗ ಏಕೆ ನಾಟಕವಾಡುತ್ತಿದ್ದಾರೆ? ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ? ನಾಚಿಕೆ ಅಗಲ್ವಾ? ಎಂದು ಕಿಡಿ ಕಾರಿದರು.

ಪಾದಯಾತ್ರೆ ಮಾಡುವ ಮೂಲಕ ಸ್ವಾತಂತ್ರ‍್ಯದ ಹೋರಾಟದಲ್ಲಿ ಜೀವ ಕಳೆದುಕೊಂಡ ನಾಯಕರ ಸ್ಮರಣೆ ಮಾಡಿಕೊಳ್ಳುತ್ತೇವೆ. ಆರ್‌ಎಸ್‌ಎಸ್‌ನ ಯಾರಾದರೂ ಒಬ್ಬ ಸ್ವಾತಂತ್ರ‍್ಯ ಹೋರಾಟದಲ್ಲಿ ಸತ್ತಿದ್ದಾರಾ? ಸ್ವಾತಂತ್ರ‍್ಯಕ್ಕಾಗಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್‌ನವರು. ಬಿಜೆಪಿಯವರು ಡೋಂಗಿಗಳು. ಬರೀ ಸುಳ್ಳು ಹೇಳಿ ನಾಟಕ ಮಾಡುವವರು. ಯಡಿಯೂರಪ್ಪ, ಬೊಮ್ಮಾಯಿ ಏನಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್

Live Tv

Leave a Reply

Your email address will not be published.

Back to top button