ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರನ್ನ ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರನ್ನ ಯಾರೂ ಬ್ಲ್ಯಾಕ್‌ಮೇಲ್ ಮಾಡೋಕೆ ಆಗಲ್ಲ. ಅವರೇ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಅವರನ್ನ ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರೇ ಎಲ್ಲರನ್ನ ಎದುರಿಸ್ತಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿದ್ದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆಯಿಂದ ಸಿಎಂ ಶಾಸಕರ ಸಭೆ ನಡೆಸ್ತಿದ್ದಾರೆ. ಶಾಸಕರು ಬರೆದ ಪತ್ರವನ್ನ ಆಧರಿಸಿ ಸಿಎಲ್‌ಪಿ ಕರೆದಿದ್ರು, ಈಗ ಸಭೆ ನಡೆಸ್ತಿದ್ದಾರೆ ಹಾಗಾಗಿ ಶಾಸಕರು ಬರೆದ ಪತ್ರ ನಕಲಿ ಅಲ್ಲ, ಅಸಲಿ ಅನ್ನೋದನ್ನ ಇದರಿಂದ ಒಪ್ಪಿಕೊಂಡಂಗೆ ಆಗಿದೆ. TCಗಳ ಬದಲಾವಣೆಗೂ ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮುಂದೆ ಶಾಸಕರ ಈ ಅಸಹನೆ ಸ್ಫೋಟಗೊಳ್ಳುತ್ತೆ. ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಉಳಿಯುತ್ತಾ? ಅನ್ನುವಂತಾಗಿದೆ. ಅಷ್ಟೊಂದು ಅಸಹಾಯಕ ಸ್ಥಿತಿಗೆ ಸರ್ಕಾರ ತಲುಪಿದೆ.
Advertisement
Advertisement
ಗುತ್ತಿಗೆದಾರ ಬಳಿ ಕಮಿಷನ್ ಕೇಳ್ತಿದ್ದಾರೆ:
ಬಿಬಿಎಂಪಿ (BBMP) ಗುತ್ತಿಗೆದಾರರಿಂದ ಬಿಲ್ ಪಾವತಿ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಲ್ ಪಾವತಿ ಮಾಡಲು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ ಅನ್ನೋದು ಗಮನಕ್ಕೆ ಬಂದಿದೆ. ಪಾರದರ್ಶಕತೆ ಆಡಳಿತ ಕೊಡ್ತೀನಿ ಅಂದವರು ಧಮ್ಕಿ ಹಾಕ್ತಿದ್ದಾರೆ. ಈಗಿನ ಬಿಲ್ ಗಳಿಗೆ ಕಮಿಷನ್ ಅಷ್ಟೇ ಅಲ್ಲ, ಕಳೆದ 5 ವರ್ಷಗಳ ಹಿಂದೆ ನಡೆದ ಕಾಮಗಾರಿಗಳ ಬಿಲ್ ಪಾವತಿಗೂ ಕಮಿಷನ್ ಕೇಳ್ತಿದ್ದಾರೆ ಎಂಬ ಮಾಹಿತಿ ಇದೆ. ಡಿಕೆಶಿ ಅವರನ್ನ ಬ್ಲ್ಯಾಕ್‌ಮೇಲ್ ಮಾಡಲು ಆಗಲ್ಲ. ಏಕೆಂದ್ರೆ ಅವರೇ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಅವರನ್ನು ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರೇ ಎಲ್ಲರನ್ನ ಎದುರಿಸ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಕೃಷಿ ಸಚಿವರ ವಿರುದ್ಧ ಪತ್ರ ಬರೆದಿದ್ದಾರೆ, ಅದರ ಬಗ್ಗೆ ತನಿಖೆ ನಡೆಸಿ ಅಂತಾ ಹೇಳಿದ್ದಾರೆ. ತನಿಖೆ ನಡೆಸಿ ವರದಿ ಕೊಡಬೇಕಾಗುತ್ತೆ. ಆದ್ರೆ ತನಿಖೆಗೂ ಮೊದಲೇ ನಕಲಿ ಅಂತಾ ಇವರು ಹೇಗೆ ಹೇಳ್ತಾರೆ? ಸಿಎಂ, ಚಲುವರಾಯಸ್ವಾಮಿ (Chaluvarayaswamy) ತನಿಖೆ ಸಂಸ್ಥೆಗಳಾ? ಸಿಐಡಿ ತನಿಖೆಗೆ ಕೊಟ್ಟಿದ್ದಾರೆ ಈಗ, ಸಿಐಡಿ ತನಿಖೆ ವರದಿ ಕೊಡಬೇಕಲ್ಲವಾ? ಸಿಐಡಿ ತನಿಖೆಗೂ ಮೊದಲೇ ಪತ್ರ ನಕಲಿ ಅಂದ್ರೆ ನಾವು ಹೇಳಬೇಕಾಗುತ್ತೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುತ್ತಾರೆ ಅಂತಾ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರ ಕುರಿತು ಮಾತನಾಡಿದ ಸಿ.ಟಿ ರವಿ, ಅಧ್ಯಕ್ಷರನ್ನ ಯಾವಾಗ ನೇಮಕ ಮಾಡ್ಬೇಕು ಅನ್ನೋದು ಹೈಕಮಾಂಡ್‌ಗೆ ಚೆನ್ನಾಗಿ ಗೊತ್ತಿದೆ. ತಾಯಿ ಬಗ್ಗೆ ಮಕ್ಕಳಿಗೆ ಹೇಗೆ ನಂಬಿಕೆ ಇರುತ್ತೆ? ಹಾಗೆಯೇ ನಮಗೆ ಪಕ್ಷದ ಮೇಲೆ, ಹೈಕಮಾಂಡ್ ಮೇಲೆ ನಂಬಿಕೆ ಇದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದು ಮೊದಲೇ ಹೇಳಿದ್ದೆ. ದೆಹಲಿಗೆ ಹೋದಾಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಹಕಾರ ಕೊಟ್ಟಿದ್ದವರಿಗೆಲ್ಲ ಧನ್ಯವಾದ ಹೇಳಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವ್ರನ್ನ ಕೇಳಲು ಬಯಸುತ್ತೇನೆ ನಿಮ್ಮ ಮೊಹಬತ್ ಚೀನಾದ ಜೊತೆಗಾ? ನಮ್ಮ ದೇಶದ ಪ್ರಧಾನಿಯನ್ನ ವಿದೇಶದಲ್ಲಿ ಟೀಕಿಸಿದ್ರಿ. ಚೀನಾದ ಕಮ್ಯೂನಿಸ್ಟ್ ಜೊತೆ ಮಾಡಿಕೊಂಡ ಒಪ್ಪಂದ ಇದೇನಾ ರಾಹುಲ್ ಗಾಂಧಿ ಅವರೇ? ನ್ಯೂಯಾರ್ಕ್ ಟೈಮ್ಸ್ ವರದಿ ಆಧರಿಸಿ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
Web Stories