ಕಾಲೇಜ್ ಕ್ಯಾಂಪಸ್‍ನಲ್ಲಿ ನಮಾಜ್ ಮಾಡಿದ ಶಿಕ್ಷಕ- ಕ್ರಮಕ್ಕೆ ಯುವ ಬಿಜೆಪಿ ಆಗ್ರಹ

Public TV
1 Min Read
muslim

ಲಕ್ನೋ: ಅಲಿಗಢದ ಕಾಲೇಜು ಕ್ಯಾಂಪಸ್‍ನಲ್ಲಿ ಶಿಕ್ಷಕರೊಬ್ಬರು ನಮಾಜ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಯುವ ಬಿಜೆಪಿ ಮುಖಂಡರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಅಲಿಗಢದ ಶ್ರೀವರ್ಷಿಣಿ ಕಾಲೇಜಿನಲ್ಲಿ ಶಿಕ್ಷಕರೊಬ್ಬರು ನಮಾಜ್ ಮಾಡುತ್ತಿರುವ ವೀಡಿಯೋ ಎಲ್ಲಕಡೆ ಹರಿದಾಡುತ್ತಿದೆ. ವೀಡಿಯೋ ನೋಡಿದ ಬಿಜೆಪಿ ಯುವ ಮೋರ್ಚಾ ಮುಖಂಡರು ಇದಕ್ಕೆ ಆಕ್ಷೀಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಮೋರ್ಚಾದ ಮಹಾನಗರ ಘಟಕದ ಉಪಾಧ್ಯಕ್ಷ ಅಮಿತ್ ಗೋಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಮೇ 27 ರಂದು ಅಲಿಗಢದ ಶ್ರೀವರ್ಷಿಣಿ ಕಾಲೇಜಿಗೆ ಆಗಮಿಸಿ, ಈ ಕುರಿತು ವಿಚಾರಣೆ ನಡೆಸಿದ್ದಾರೆ. ಅದಕ್ಕೆ ಕಾಲೇಜು ಪ್ರಾಂಶುಪಾಲರು, ಸಮಿತಿ ರಚಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರ ಮುಖ ಮಾತ್ರ ರಾಮನದ್ದು, ಬುದ್ಧಿ ರಾವಣನದು: ಕಟೀಲ್

muslim a

ಈ ಕುರಿತು ಮಾತನಾಡಿದ ಅಮಿತ್ ಗೋಸ್ವಾಮಿ, ಇದು ನಮಾಜ್ ಓದಲು ಧಾರ್ಮಿಕ ಸ್ಥಳವಲ್ಲ. ಪ್ರಾಧ್ಯಾಪಕರು ಮಕ್ಕಳಿಗೆ ತರಗತಿ ಮಾಡುವುದನ್ನು ಬಿಟ್ಟು, ಶಿಕ್ಷಣ ಸಂಸ್ಥೆಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಹೇಗೆ? ಹಿಂದೂಗಳು, ಮುಸ್ಲಿಮರು, ಸಿಖ್ಖರು ಸೇರಿದಂತೆ ಎಲ್ಲ ಧರ್ಮೀಯರು ಶಿಕ್ಷಣ ಸಂಸ್ಥೆಗಳಿಗೆ ಬರುವುದರಿಂದ ಅವರನ್ನೂ ಸಮಾನವಾಗಿ ಪರಿಗಣಿಸಬೇಕು. ಅದಕ್ಕೆ ನಮಾಜ್ ಮಾಡಿದ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸದರು.

kalaburagi school 2

ಪರಿಸ್ಥಿತಿಯ ಬಗ್ಗೆ ವಿವರಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಅನಿಲ್ ಕುಮಾರ್ ಗುಪ್ತಾ, ಈ ವಿಷಯಕ್ಕೆ ಸಂಬಂಧಿಸಿದಂತೆ, ನಾನು 28 ರಂದು ಬೆಳಗ್ಗೆ ಪ್ರಯಾಗ್‍ರಾಜ್‍ನಿಂದ ಹಿಂತಿರುಗಿದ್ದೇನೆ. ನಾನು ನನ್ನ ಹಾಲಿ ಪ್ರಾಂಶುಪಾಲರನ್ನು ಕರೆದು ವಿಷಯದ ಬಗ್ಗೆ ವಿಚಾರಿಸುತ್ತೇನೆ. ಈ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು. ಮುಂದೆ ಇಂತಹ ಧಾರ್ಮಿಕ ವಿವಾದ ಸೃಷ್ಟಿಯಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದರು. ಇದನ್ನೂ ಓದಿ:  29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಅರೆಸ್ಟ್ 

Share This Article
Leave a Comment

Leave a Reply

Your email address will not be published. Required fields are marked *