DistrictsKarnatakaLatestMain PostTumakuru

ಸಿದ್ದರಾಮಯ್ಯರ ಮುಖ ಮಾತ್ರ ರಾಮನದ್ದು, ಬುದ್ಧಿ ರಾವಣನದು: ಕಟೀಲ್

ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಮುಖ ಮಾತ್ರ ರಾಮನ ರೀತಿ ಇದೆ. ಆದರೆ ಅವರ ಬುದ್ಧಿ ರಾವಣನದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಪಕ್ಷ ನಾಯಕರನ್ನು ಟೀಕಿಸಿದರು.

ತುಮಕೂರಿನಲ್ಲಿ ನಡೆದ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳಲಿ. ಅವರ ನಡವಳಿಕೆಯಿಂದ ರಾಮನಿಗೆ ಅಪಮಾನ ಆಗುತ್ತಿದೆ. ರಾಮನ ಹೆಸರು ಇಟ್ಟುಕೊಂಡ ಸಿದ್ದರಾಮಯ್ಯ ಅವರ ಬುದ್ಧಿ, ಆಲೋಚನೆ ಎಲ್ಲವೂ ರಾವಣನದು. ರೈತರಿಗೆ ಉಚಿತ ವಿದ್ಯುತ್, ಬೆಂಬಲ ಬೆಲೆ ಏನೂ ಕೊಡದೆ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರೇ ಕಾರಣರಾದರು ಎಂದು ಆರೋಪಿಸಿದರು. ಇದನ್ನೂ ಓದಿ: 29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಅರೆಸ್ಟ್ 

ಅಷ್ಟೇ ಏಕೆ ಕುರುಬ ಸಮುದಾಯದವರ ಬಗ್ಗೆಯೂ ಸಿದ್ದಣ ಚಿಂತನೆ ಮಾಡಿಲ್ಲ. ಕನಕನ ಕ್ಷೇತ್ರ ಅಭಿವೃದ್ಧಿ ಮಾಡಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರು. ನೀವು ಕುರುಬರಾಗಿ ಏನನ್ನು ಮಾಡಿದ್ರಿ? ಪರಮೇಶ್ವರನನ್ನು ಸೋಲಿಸಿ ದಲಿತರ ಬಲ ಸಮುದಾಯಕ್ಕೆ ಅನ್ಯಾಯ ಮಾಡಿದ್ರಿ. ಖರ್ಗೆ ಅವರ ವಿರುದ್ಧ ಪಿತೂರಿ ಮಾಡಿ ದಲಿತರಿಗೆ ಅನ್ಯಾಯ ಮಾಡಿದ್ರಿ. ಲಿಂಗಾಯತ ಧರ್ಮ ಒಡೆಯಲು ಹೋಗಿ ವೀರಶೈವ ಲಿಂಗಾಯತರಿಗೆ ಅನ್ಯಾಯ ಮಾಡಿದ್ದು, ಸಿದ್ದರಾಮಯ್ಯ. ಟಿಪ್ಪು ಜಯಂತಿ ಆಚರಣೆ ಮಾಡಿ ಹಿಂದೂ ಮುಸ್ಲಿಂ ಸಮುದಾಯವನ್ನು ಒಡೆದ್ರಿ. ಹಾಗಾಗ ರೈತರ ಶಾಪ ಸಿದ್ರಾಮಣ್ಣನ ಮೇಲೆ ಇದೆ ಹಾಗಾಗಿ ಮತ್ತೆ ಸಿಎಂ ಆಗಲ್ಲ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಈ ದೇಶವನ್ನು ಮಾರಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬರೊಬ್ಬರಿ 4 ಲಕ್ಷ ಕೋಟಿ ರೂ. ಭ್ರಷ್ಟಾಚಾರವಾಗಿದೆ. ಈ ಮೂಲಕ ದೇಶ ಮಾರಾಟ ಮಾಡಿದೆ. ದೇಶವನ್ನು ಲೂಟಿ ಮಾಡಿದೆ. ಆದರೆ ಈ ದೇಶ ಸಂಕಷ್ಟದಲ್ಲಿ ಇದ್ದಾಗ ದೇಶ ರಕ್ಷಣೆ ಮಾಡಿದ್ದು ಆರ್‌ಎಸ್‍ಎಸ್. ಕಾಂಗ್ರೆಸ್ ಕಳ್ಳಕಾಕರ ಪಕ್ಷ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಎಲ್ಲರೂ ಬೇಲ್ ಮೇಲೆ ಇದ್ದಾರೆ. ಸಿದ್ದರಾಮಯ್ಯ ಅವರು ಕಳ್ಳರ ಸಂಘ ಇಟ್ಟುಕೊಂಡಿದ್ದಾರೆ. ಇಂಥವರಿಗೆ ಆರ್‌ಎಸ್‍ಎಸ್ ಬಗ್ಗೆ ಮಾತಾಡುವ ಯೋಗ್ಯತೆ, ನೈತಿಕತೆ ಎರಡೂ ಇಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ 

Leave a Reply

Your email address will not be published.

Back to top button