ಭೋಪಾಲ್: ಕಾಂಗ್ರೆಸ್ ಶಾಸಕ ಸುರೇಶ್ ರಾಜೆ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಮಾಜಿ ಸಚಿವೆ ಇಮಾರ್ತಿ ದೇವಿ ಕಿತ್ತಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗಷ್ಟೇ ಡಾ. ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ವಿಚಾರವಾಗಿ ಸಹರಾಯ್ ಗ್ರಾಮದಲ್ಲಿ ನಡೆದ ಚರ್ಚೆ ವೇಳೆ ಸುರೇಶ್ ರಾಜೆ ಮತ್ತು ಇಮಾರ್ತಿ ದೇವಿ ಮುಖಾಮುಖಿಯಾಗಿದ್ದರು. ಈ ವೇಳೆ ಪೌರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಸಲಾಗುತ್ತಿದೆ ಎಂದು ಆರೋಪದಡಿ ಇಬ್ಬರೂ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಸಿದ್ದರಾಮಯ್ಯ ನಿಮಗೆ ಕಾಳಜಿ ಇಲ್ಲವೇ?: ಬಿಸಿ ನಾಗೇಶ್
Advertisement
ये राजनीति का तराजू काल है, @BJP4India नेता इमरती देवी @INCIndia @INCMP विधायक सुरेश राजे से डबरा में भिड़ गईं,पार्षदों की खरीद बिक्री का आरोप लगा, इमरती ने गृहमंत्री @drnarottammisra का नाम लेकर राजे को कहा “तुम गये थे 10 पार्षद बेचवे!” दोनों दल सोचें किसने खरीदा किसने बेचा! pic.twitter.com/tAFWtUZlM9
— Anurag Dwary (@Anurag_Dwary) September 11, 2022
Advertisement
ವೀಡಿಯೋದಲ್ಲಿ ಇಮಾರ್ತಿ ದೇವಿ ಅವರು ಆಗಮಿಸಿದ ವೇಳೆ ಸುರೇಶ್ ರಾಜೆ ಅವರು ನೆಲದ ಮೇಲೆ ಸ್ಥಳೀಯರೊಂದಿಗೆ ಕುಳಿತುಕೊಂಡಿರುತ್ತಾರೆ. ಈ ವೇಳೆ ಇಮಾರ್ತಿ ದೇವಿ ಅವರು ಕೌನ್ಸಿಲರ್‍ಗಳನ್ನು ಖರೀದಿಸಿದ್ದಾರೆ ಎಂದು ಸುರೇಶ್ ರಾಜೆ ರೇಗಿಸಿದ್ದಾರೆ. ಇದಕ್ಕೆ ಮರು ಉತ್ತರವಾಗಿ ನೀವು ಕೌನ್ಸಿಲರ್‌ಗಳನ್ನು ಮಾರಾಟ ಮಾಡಿದ್ದೀರಾ. ನಾನು 10 ಕೌನ್ಸಿಲರ್‌ಗಳನ್ನು ಮಾರಾಟ ಮಾಡಲು ನರೋತ್ತಮ್ ಮಿಶ್ರಾ ಬಳಿ ಹೋಗಿದ್ನಾ ಎಂದು ಇಮಾರ್ತಿ ದೇವಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಾರಾಂತ್ಯಕ್ಕೆ ಅವಕಾಶ ಕೋರಿ ವರನ ಸ್ನೇಹಿತರಿಂದ ವಧು ಬಳಿ ಸಹಿ- ಅಷ್ಟಕ್ಕೂ ಆ ಬಾಂಡ್ ಪೇಪರ್‌ನಲ್ಲಿ ಏನಿತ್ತು?
Advertisement
Advertisement
ಈ ಆರೋಪದಿಂದ ರೊಚ್ಚಿಗೆದ್ದ ಸುರೇಶ್ ರಾಜೆ, ನಾನು ಕೌನ್ಸಿಲರ್‌ಗಳನ್ನು ಯಾವಾಗ ಮಾರಿದೆ? ನಾನು ಅವರನ್ನು ಯಾರಿಗೆ ಮಾರಾಟ ಮಾಡಿದೆ ಹೇಳಿ. ನನ್ನ ಕೌನ್ಸಿಲರ್‌ಗಳನ್ನು ಯಾರು ಖರೀದಿಸಿದರು ಹೇಳಿ? ಎಲ್ಲರ ಮುಂದೆ ಕೂಗಾಡಿದ್ದಾರೆ.