ಚೆನ್ನೈ: ಮದುವೆಯಾದ ನಂತರ ಹೆಣ್ಣು, ಗಂಡುವಿನಲ್ಲಿ ಸಾಕಷ್ಟು ರೀತಿಯ ಬದಲಾವಣೆ ಆಗುವುದು ಸಹಜ. ಕೆಲವೊಮ್ಮೆ ಅವರಿಗೆ ಸ್ನೇಹಿತರನ್ನು ಭೇಟಿಯಾಗಲು ಸಮಯ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ವರನ ಸ್ನೇಹಿತರು ಇದಕ್ಕೆಲ್ಲಾ ಕಡಿವಾಣ ಹಾಕಲು ಮದುವೆ ದಿನದಂದು ಉಡುಗೊರೆ ಬದಲಿಗೆ ವಧುವಿನ ಬಳಿ ಬಾಂಡ್ ಪೇಪರ್‌ನಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ.
ಅರೇ.. ಇದ್ಯಾವ ರೀತಿ ಸಹಿ ಎಂದುಕೊಳ್ಳುತ್ತಿದ್ದಾರಾ. ಹೌದು.. ವರನ ಸ್ನೇಹಿತರು ವಾರಕ್ಕೊಮ್ಮೆ ವರನಿಗೆ ಗ್ರೌಂಡ್‍ನಲ್ಲಿ ಕ್ರಿಕೆಟ್( Cricket) ಆಡಲು ಅವಕಾಶ ನೀಡಬೇಕು ಎಂದು ನಿಯಮ ಮಾಡಿ ಸಹಿ ಹಾಕಿಸಿಕೊಂಡಿದ್ದಾರೆ.
Advertisement
Advertisement
ಇದು ನಡೆದಿರುವುದು ತಮಿಳು ನಾಡಿನ(Tamil Nadu) ಉಸಿಲಂಪಟ್ಟಿ ಬಳಿಯ ಕೀಖಾ ಪುದೂರಿನಲ್ಲಿ. ತೇಣಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಹರಿಪ್ರಸಾದ್‍ನ ಜೊತೆಗೆ ಪೂಜಾ ಎಂಬಾಕೆಯ ಮದುವೆ ನಡೆದಿತ್ತು. ವರ-ವಧುವಿನ ಕಡೆಯ ಸಂಬಂಧಿಕರು, ಪಾಲಕರು ಸೇರಿ ಎಲ್ಲರೂ ಸಂಭ್ರಮದಿಂದ ಮದುವೆ(Marriage) ಮನೆಯಲ್ಲಿ ಓಡಾಡುತ್ತಿದ್ದರು. ವಧು ವರರು ಖುಷಿಯಾಗಿ ಇದ್ದರು. ಆ ವೇಳೆಗೆ ಸ್ಟೇಜ್‍ಗೆ ಬಂದ ಹರಿಪ್ರಸಾದ್‍ನ ಸ್ನೇಹಿತರು ಪೂಜಾಗೆ ಹಳದಿ ಫೈಲ್‍ವೊಂದನ್ನು ನೀಡಿ ಸಹಿ ಹಾಕಲು ಹೇಳಿದ್ದಾರೆ.
Advertisement
ಪೂಜಾ ಒಮ್ಮೆ ಆಶ್ಚರ್ಯಕ್ಕೀಡಾಗಿ ಫೈಲ್‍ನಲ್ಲಿ ಏನಿದೆ ಯಾವ ಕಾರಣಕ್ಕಾಗಿ ಸಹಿ ಹಾಕಬೇಕು ಎಂದು ನೋಡಿದ್ದಾರೆ. ಆಗ ಅಲ್ಲಿ ಬರೆದಿರುವುದನ್ನು ನೋಡಿ ಒಮ್ಮೆಲೆ ಶಾಕ್ ಆಗಿದ್ದಾಳೆ. ಆ ಫೈಲ್‍ನಲ್ಲಿದ್ದ ಬಾಂಡ್ ಪೇಪರ್‌ನಲ್ಲಿ ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್‍ನಲ್ಲಿ ಮದುವೆಯ ನಂತರವೂ ಹರಿಪ್ರಸಾದ್ ಆಡಲು ಅವಕಾಶ ನೀಡಬೇಕು ಎಂದು ಬರೆಯಲಾಗಿತ್ತು, ಆರಂಭದಲ್ಲಿ ಈ ಒಪ್ಪಂದವು ತಮಾಷೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕೊಂಡಿದ್ದರು.
Advertisement
ಆದರೆ ವರನ ಸ್ನೇಹಿತರು ಈ ಒಪ್ಪಂದವು ಗಂಭೀರವಾದದ್ದು, ಈ ಬಾಂಡ್ ಪೇಪರ್‌ಗೆ(Stamp Paper) ಸಹಿ ಮಾಡಬೇಕೆಂದು ಒತ್ತಾಯಿಸಿದರು. ತಮಿಳಿನಲ್ಲಿ ಐದು ಸಾಲಿನ ಒಪ್ಪಂದವಿತ್ತು.
ಬಾಂಡ್ ಪೇಪರ್‌ನಲ್ಲಿ ಏನಿತ್ತು?: ಮುಂದಿನ ಎಲ್ಲಾ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡಕ್ಕಾಗಿ ತನ್ನ ಪತಿಗೆ ಕ್ರಿಕೆಟ್ ಆಡಲು ಅವಕಾಶ ನೀಡುತ್ತೇನೆ. ನಾನು, ಶ್ರೀಮತಿ ಪೂಜಾ, ಸೂಪರ್ ಸ್ಟಾರ್ ತಂಡದ ನಾಯಕನಾದ ನನ್ನ ಪತಿ ಹರಿಪ್ರಸಾದ್, ಇಂದಿನಿಂದ ಮುಂದಿನ ಎಲ್ಲಾ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ತಂಡದ ಪರ ಕ್ರಿಕೆಟ್ ಆಡುತ್ತಾನೆ ಎಂದು 20 ರೂಪಾಯಿಯ ಸ್ಟಾಂಪ್ ಪೇಪರ್‌ನಲ್ಲಿ ಬಾಂಡ್ ಎಕ್ಸಿಕ್ಯೂಟ್ ಮಾಡಲಾಗಿತ್ತು. ನಂತರ ಪೂಜಾ ಖುಷಿಯಿಂದಲೇ ಒಪ್ಪಂದಕ್ಕೆ ಸಹಿ ಹಾಕಿದರು.