– ಆಯೋಗಕ್ಕೆ ಒಟ್ಟು 5 ದೂರುಗಳನ್ನು ನೀಡಿದ ಬಿಜೆಪಿ
ಬೆಂಗಳೂರು: ಮೋದಿ (Narendra Modi) ಫೋಟೋ ಬಳಕೆ ವಿಚಾರವಾಗಿ ಶಿವಮೊಗ್ಗ (Shivamogga) ಬಂಡಾಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ವಿರುದ್ಧ ಬಿಜೆಪಿ (BJP) ಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ.
Advertisement
ಮೋದಿ ಫೋಟೋ ಬಳಕೆಗೆ ಬ್ರೇಕ್ ಹಾಕಲು ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ, ಛಲವಾದಿ ನಾರಾಯಣ ಸ್ವಾಮಿ ಹಾಗೂ ಪಿ ರಾಜೀವ್ ನೇತೃತ್ವದಲ್ಲಿ ಈಶ್ವರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದನ್ನೂ ಓದಿ: ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ, ಕಾಂಗ್ರೆಸ್ ಹೊಸತೊಡಕು ವಿರೋಧಿ: ಜೆಡಿಎಸ್ ಕಿಡಿ
Advertisement
Advertisement
ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಛಲವಾದಿ ನಾರಾಯಣ (Chalavadi Narayanaswamy) ಸ್ವಾಮಿ, ಶಿವಮೊಗ್ಗದಲ್ಲಿ ನಮ್ಮ ಅಭ್ಯರ್ಥಿಯಾಗಿ ರಾಘವೇಂದ್ರ ಅವರು ನಿಂತಿದ್ದಾರೆ. ಆದರೆ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಹೇಳುತ್ತಿದ್ದಾರೆ. ಈಶ್ವರಪ್ಪ ಅವರು ಪ್ರಧಾನಿ ಮೋದಿ ಅವರ ಭಾವಚಿತ್ರ ಬಳಕೆ ಮಾಡುತ್ತಿದ್ದಾರೆ. ಹಾಗಾಗಿ ಇದರ ಬಗ್ಗೆ ಗಮನ ಹರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಒಳನುಸುಳುವಿಕೆ ತಡೆಯಲು ಬಿಜೆಪಿಗೆ ಮತ ನೀಡಿ: ಬಂಗಾಳದಲ್ಲಿ ಅಮಿತ್ ಶಾ ಮನವಿ
Advertisement
ಮೋದಿ ಅವರ ಹೆಸರನ್ನು ಕೂಡ ಬಳಕೆ ಮಾಡಬಾರದು. ಒಂದು ಪಕ್ಷದ ನಾಯಕರ ಹೆಸರನ್ನು ಆಗಲಿ ಬಳಸುವ ಹಾಗಿಲ್ಲ. ಅದಕ್ಕೆ ವಿರೋಧ ಮಾಡುತ್ತೇವೆ. ನಮ್ಮ ಪಕ್ಷದ ಲೀಡರ್‌ಗಳ ಹೆಸರನ್ನು ಬಳಸಬಾರದು. ಪ್ರಧಾನ ಮಂತ್ರಿಗಳ ಪೋಟೋ ಆಗಲಿ, ಹೆಸರು ಆಗಲಿ ಬಳಕೆ ಮಾಡಬಾರದು. ನಾವೇನು ಪಕ್ಷದಿಂದ ಅವರನ್ನು ವಜಾ ಮಾಡಿಲ್ಲ ವಿತ್ ಡ್ರಾ ಮಾಡಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಹೇಳಿದರು. ಇದನ್ನೂ ಓದಿ: ಕೇಜ್ರಿವಾಲ್ ಬಂಧನ ಬಳಿಕ ಎಎಪಿಗೆ ಮತ್ತೊಂದು ಶಾಕ್ – ಸಚಿವ ರಾಜ್‌ಕುಮಾರ್ ಆನಂದ್ ರಾಜೀನಾಮೆ
ಚುನಾವಣಾ ಆಯೋಗಕ್ಕೆ ಬಿಜೆಪಿ ಒಟ್ಟು ಐದು ದೂರುಗಳನ್ನು ನೀಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅಧಿಕಾರಿ ಊಟ ಬಡಿಸಿರುವ ಬಗ್ಗೆ ಬಿಜೆಪಿ ದೂರು ನೀಡಿದೆ. ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ನಿರ್ಮಾಪಕರಾಗಿರುವ ‘ರಣಗಲ್’ ಚಲನಚಿತ್ರದ ಜಾಹೀರಾತು ಮೊತ್ತವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ದೂರು ನೀಡಲಾಗಿದೆ. ಅಲ್ಲದೇ ಕುಡಚಿಯಲ್ಲಿ ಬಿಜೆಪಿ ಎಲ್‌ಇಡಿ ವಾಹನದಲ್ಲಿದ್ದ ಪ್ರಣಾಳಿಕೆ ಸಲಹಾ ಪೆಟ್ಟಿಗೆಯನ್ನು ಸುಟ್ಟು ಹಾಕಿರುವ ಬಗ್ಗೆ ಕೂಡಾ ದೂರು ಕೊಟ್ಟಿದೆ. ಅಷ್ಟು ಮಾತ್ರವಲ್ಲದೇ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಕ್ಕಿ ಹಂಚುತ್ತಿರುವ ಆರೋಪದ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಇದನ್ನೂ ಓದಿ: ಸಾಯಿಬಾಬಾ ಮಂದಿರ ನಿರ್ಮಿಸಿ ತಾಯಿ ಕನಸು ಈಡೇರಿಸಿದ ನಟ ವಿಜಯ್