ಲಕ್ನೋ: ಆಸ್ಪತ್ರೆಯಲ್ಲಿ (Hospital) ಪತ್ನಿಗೆ ಸೊಳ್ಳೆ (Mosquitoes) ಕಚ್ಚುತ್ತಿದೆ ಎಂದು ವ್ಯಕ್ತಿಯೊಬ್ಬ ಪೊಲೀಸರ ಬಳಿ ಸಹಾಯ ಕೇಳಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಚಂದೌಸಿಯ ರಾಜ್ ಮೊಹಲ್ಲಾದ ನಿವಾಸಿ ಅಸದ್ ಖಾನ್ ಪೊಲೀಸರ ಬಳಿ ಸಹಾಯ ಕೇಳಿದ ವ್ಯಕ್ತಿ. ಈತ ಪತ್ನಿಗೆ (Wife) ಹೆಣ್ಣು ಮಗು ಜನಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಚಂದೌಸಿಯ ಹರಿ ಪ್ರಕಾಶ್ ನರ್ಸಿಂಗ್ ಹೋಮ್‍ಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆಗೆ ಹೆಚ್ಚು ಸೊಳ್ಳೆ ಕಡಿದಿತ್ತು. ಇದನ್ನು ಗಮನಿಸಿದ ಅಸದ್ ಖಾನ್ ಟ್ವೀಟ್ ಮಾಡಿದ್ದು, ಸಹಾಯಕ್ಕಾಗಿ ಉತ್ತರಪ್ರದೇಶದ ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ.
‘माफिया से लेकर मच्छर तक का निदान’ –
नर्सिंग होम में अपने नवजात शिशु और प्रसूता पत्नी को मच्छरों से राहत देने के लिये एक व्यक्ति द्वारा ट्वीट कर मदद की अपील की गयी। #UP112 PRV 3955 ने त्वरित कार्यवाही कर नर्सिंग होम में मॉस्किटो क्वॉइल पहुँचाया।#UPPCares@sambhalpolice pic.twitter.com/WTrK7o8bhY
— UP POLICE (@Uppolice) March 20, 2023
ಟ್ವೀಟ್‍ನಲ್ಲಿ ಏನಿದೆ?: ನನ್ನ ಹೆಂಡತಿ ಚಂದೌಸಿಯಲ್ಲಿರುವ ಹರಿ ಪ್ರಕಾಶ್ ನಸಿರ್ಂಗ್ ಹೋಮ್‍ನಲ್ಲಿ ಪುಟ್ಟ ದೇವತೆಗೆ ಜನ್ಮ ನೀಡಿದ್ದಾಳೆ. ನನ್ನ ಹೆಂಡತಿ ನೋವಿನಿಂದ ಬಳಲುತ್ತಿದ್ದಾಳೆ. ಜೊತೆಗೆ ಆಕೆಗೆ ಹಲವಾರು ಸೊಳ್ಳೆಗಳು ಕಚ್ಚುತ್ತಿವೆ. ದಯವಿಟ್ಟು ನನಗೆ ತಕ್ಷಣ ಮಾರ್ಟೀನ್ ಕಾಯಿಲ್ ಅನ್ನು ಒದಗಿಸಿ ಎಂದು ಟ್ವೀಟ್ ಮಾಡಿದ್ದಾನೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಿಂದ ಸೂಚನೆ ಪಡೆದ ಪೊಲೀಸರು ಸೊಳ್ಳೆ ನಿವಾರಕ ಕಾಯಿಲ್‍ನೊಂದಿಗೆ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿಸಿದರು. ವಿಷಯವನ್ನು ಅರಿತು ಸಹಾಯ ಮಾಡಿದ ಪೊಲೀಸರಿಗೆ ಅಸಾದ್ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಸದ್, ನನ್ನ ಹೆಂಡತಿ ನಮ್ಮ ಮಗುವಿಗೆ ಜನ್ಮ ನೀಡಲು ಆಸ್ಪತ್ರೆಯಲ್ಲಿದ್ದಳು. ಆಕೆ ಅನುಭವಿಸುತ್ತಿದ್ದ ನೋವಿನ ಜೊತೆಗೆ ಸೊಳ್ಳೆಗಳು ಕಚ್ಚುತ್ತಿದ್ದವು. ಸಮಯ ಬೆಳಗ್ಗೆ 2: 45 ಆಗಿದ್ದರಿಂದ ಯುಪಿ ಪೊಲೀಸರನ್ನು ಹೊರತುಪಡಿಸಿ ಬೇರೆಯವರ ಸಹಾಯವನ್ನು ಪಡೆಯಲು ನಾನು ಯೋಚಿಸಲಿಲ್ಲ. ಆದರೆ ನಾನು ಟ್ವೀಟ್ ಮಾಡಿದ ಕೂಡಲೇ ನನಗೆ ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿತು. ಅದರ ನಂತರ, ಅವರು ಸೊಳ್ಳೆ ನಿವಾರಕ ಕಾಯಿಲ್ ಅನ್ನು 10 ರಿಂದ 15 ನಿಮಿಷಗಳಲ್ಲಿ ತಲುಪಿಸಿದರು. ಈ ಹಿನ್ನೆಲೆಯಲ್ಲಿ ಯುಪಿ ಪೊಲೀಸರಿಗೆ ಸಹಾಯಕ್ಕೆ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ: ಪಕ್ಷದಲ್ಲೇ ಉಳಿದುಕೊಳ್ಳುವಂತೆ ನಾರಾಯಣಗೌಡರಿಗೆ ಯಡಿಯೂರಪ್ಪ ಬುದ್ಧಿವಾದ