ಬಿಪರ್ಜೋಯ್ ಚಂಡಮಾರುತ ಎಫೆಕ್ಟ್ – ಹಾಸನದಲ್ಲಿ ಧಾರಾಕಾರ ಮಳೆ

Public TV
1 Min Read
RAIN 1

ಹಾಸನ: ಬಿಪರ್ಜೋಯ್ ಚಂಡುಮಾರುತದ (Biporjoy Cyclone) ಪರಿಣಾಮದಿಂದಾಗಿ ಹಾಸನ (Hassan) ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ.

ಭಾನುವಾರ ಬೆಳಗ್ಗೆಯಿಂದ ಆರಂಭವಾದ ಗಾಳಿ ಸಹಿತ ಮಳೆ (Rain) ಮುಂದುವರಿಯುತ್ತಿದೆ. ಹಾಸನ ನಗರ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದ್ದು, ಭಾರೀ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗುತ್ತಿದೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – ಕುಸ್ತಿಪಟುಗಳಿಂದ ವೀಡಿಯೋ ಸಾಕ್ಷಿ ಕೇಳಿದ ಪೊಲೀಸರು

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಬಿತ್ತನೆ ಮಾಡಿದ್ದ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿದ್ದವು. ಈಗ ಮುಂಗಾರು ಪ್ರವೇಶದಿಂದ ಕೃಷಿ ಚಟುವಟಿಕೆಗಳಿಗೆ ಮರಳಿ ಚಾಲನೆ ದೊರೆತಿದೆ. ಇದನ್ನೂ ಓದಿ: ಸಂಜಯ್ ರಾವತ್, ಸಹೋದರನಿಗೆ ಕೊಲೆ ಬೆದರಿಕೆ- ಇಬ್ಬರ ಬಂಧನ

Share This Article