– ನಕ್ಕು ನಗಿಸೋಕೆ ಬರ್ತಿದ್ದಾರೆ ಕಾಮಿಡಿ ಕಿಂಗ್ ಚಿಕ್ಕಣ್ಣ
ಕಾಮಿಡಿ ಕಿಂಗ್ ಚಿಕ್ಕಣ್ಣ, ಕಿರು ತೆರೆ ನಟ ಶಿಶಿರ್ ಶಾಸ್ತ್ರಿ ಕಾಮಿಡಿರಸದೌತಣ ನೀಡಲು ಬರ್ತಿರುವ ಬಿಲ್ ಗೇಟ್ಸ್ ಚಿತ್ರದ ಟೈಲರ್ ರಿಲೀಸ್ ಆಗಿದೆ. ಟ್ರೈಲರ್ ಸಖತ್ ಮಜಾವಾಗಿದ್ದು ಕಾಮಿಡಿ ಎಲಿಮೆಂಟ್, ಪಂಚಿಂಗ್ ಡೈಲಾಗ್ ಗಳು ನಕ್ಕು ನಗಿಸುತ್ತವೆ.
ಸೀರಿಯಸ್ ಆದ ವಿಷಯವೊಂದನ್ನು ಕಾಮಿಕ್ ವೇನಲ್ಲಿ ಹೇಳೋ ಪ್ರಯತ್ನವನ್ನು ನಿರ್ದೇಶಕ ಶ್ರೀನಿವಾಸ್ ಮಾಡಿದ್ದಾರೆ. ಕಾಮಿಡಿ ಜೊತೆ ಹಾರಾರ್ ಸ್ಪರ್ಶ ಕೂಡ ಚಿತ್ರದಲ್ಲಿದ್ದು ಸಾಕಷ್ಟು ಕುತೂಹಲವನ್ನು ಟ್ರೈಲರ್ ಮೂಡಿಸಿದೆ. ಟ್ರೈಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ಬ್ಯಾಂಕ್ ಜನಾರ್ಧನ್, ಗಿರಿ, ವಿ.ಮನೋಹರ್, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ನಟರ ದಂಡು ಚಿತ್ರದ ತಾರಾಬಳಗದಲ್ಲಿದೆ. ಶ್ರೀನಿವಾಸ ಅವರ ಮೊದಲ ಚಿತ್ರ ಇದಾಗಿದ್ದು ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಇನ್ನಷ್ಟು ಸ್ಯಾಂಪಲ್ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.
Advertisement
ಚಿತ್ರದಲ್ಲಿ ನಾಯಕಿಯರಾಗಿ ಅಕ್ಷರ ರೆಡ್ಡಿ, ರಶ್ಮಿಕಾರೋಜಾ ಅಭಿನಯಿಸಿದ್ದು, ಪಾಂಚಜನ್ಯ ಸಿನಿ ಕ್ರಿಯೇಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ಹಾಡುಗಳು ಕೂಡ ಗಮನ ಸೆಳೆದಿದ್ದು, ನೊಬಿಲ್ ಪೌಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಚಿತ್ರ ತೆರೆಗೆ ಬರಲಿದ್ದು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸೋದಂತೂ ಪಕ್ಕಾ.