ಬೆಂಗಳೂರು: ಮದುವೆಯ ಬಗ್ಗೆ ನಾನು ನಿರ್ಧಾರ ಮಾಡಿಲ್ಲ. ತಂದೆ, ತಾಯಿ ಇಷ್ಟ ಪಟ್ಟ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ ಎಂದು ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 5ರ ವಿನ್ನರ್ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಅವರು ಸೋಮವಾರ ರಾತ್ರಿ ಪಬ್ಲಿಕ್ ಟಿವಿ ಕಚೇರಿಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
Advertisement
ಈ ವೇಳೆ ನಿಮ್ಮ ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದ ಪ್ರಶ್ನೆಗೆ, ನನ್ನ ತಂದೆ-ತಾಯಿ ಹೇಗೆ ನಿರ್ಧರಿಸಿತ್ತಾರೋ ಆ ರೀತಿ ಮದುವೆಯಾಗಲ್ಲೂ ಇಷ್ಟಪಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಶನಿವಾರ ಪಂಚಾಯ್ತಿ ನಡೆದಾಗ ಸುದೀಪ್ ಸರ್ ಹತ್ತಿರ ನಾನು ಮದುವೆ ಆಗೋ ಹುಡುಗಿ ಹೋಂ ಮೇಕರ್ ಆಗಿ ಇರಬೇಕು ಎಂದು ಹೇಳಿದ್ದೆ ಎಂದರು.
Advertisement
Advertisement
ಮದುವೆ ವಿಚಾರದ ಬಗ್ಗೆ ನಾನು ಬ್ಲಾಂಕ್ ಆಗಿದ್ದೇನೆ. ನನ್ನ ತಂದೆ-ತಾಯಿ ಹೇಗೆ ನಿರ್ಧರಿಸಿತ್ತಾರೋ ಆ ರೀತಿ ಮದುವೆಯಾಗಲ್ಲೂ ಇಷ್ಟಪಡುತ್ತೇನೆ. ನಾನು ಮದುವೆ ಆಗೋ ಹುಡುಗಿ ಹೋಂ ಮೇಕರ್ ಆಗಿ ಇರಬೇಕು. ನನ್ನ ಸಂಗಾತಿ ಹೇಗೆ ಇರಬೇಕೆಂಬುದು ನನ್ನ ತಾಯಿಗೆ ಗೊತ್ತಿದೆ. ಅವರು ಈ ವಿಷಯದ ಬಗ್ಗೆ ನೋಡಿಕೊಳ್ಳುತ್ತಾರೆ ಎಂದು ಚಂದನ್ ತಿಳಿಸಿದ್ದಾರೆ.
Advertisement
ಈ ವಿಚಾರದ ಬಗ್ಗೆ ಪೋಷಕರು, ಚಂದನ್ ಶೆಟ್ಟಿಗೆ ಬೆನ್ನುಲುಬು ಆಗಿ ಇರಬೇಕು. ಗೃಹಿಣಿ ಎಂದ ತಕ್ಷಣ ಮನೆಯಲ್ಲಿ ಅಡುಗೆ ಮಾಡಿ, ಊಟ ಬಡಿಸಿ, ಮನೆ ಕೆಲಸ ಮಾಡಿಕೊಂಡು ಇರಬೇಕು ಎಂದಲ್ಲ. ಅತ್ತೆ-ಮಾವನಿಗೆ ತಕ್ಕ ಸೊಸೆ, ಗಂಡನಿಗೆ ಒಳ್ಳೆ ಹೆಂಡತಿ ಹಾಗೂ ಮೈದುನನಿಗೆ ಒಳ್ಳೆಯ ಅತ್ತಿಗೆ ಆಗಿ ಇರಬೇಕು. ಸಂಗೀತದ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು ಎಂದು ಪ್ರತಿಕ್ರಿಯಿಸಿದ್ದರು.
ಈ ಸಂದರ್ಶನದಲ್ಲಿ ಚಂದನ್ ಶೆಟ್ಟಿ ತಮ್ಮ ಪ್ರೇಮ ಪ್ರಸಂಗವನ್ನು ತೆರೆದಿಟ್ಟರು. ಈ ಹಿಂದೆ ನನಗೆ ಲವ್ ಆಗಿತ್ತು. ನಾವಿಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದೇವು. ನಮ್ಮಿಬ್ಬರ ನಡುವೆ ಕೆಲವು ಬಿನ್ನಾಭಿಪ್ರಾಯಗಳು ಇತ್ತು. ನಾನು ನನ್ನ ತಂದೆ-ತಾಯಿಯನ್ನು ಬಿಟ್ಟು ಬೇರೆ ಮನೆ ಮಾಡಬೇಕೆಂದು ಹೇಳಿದ್ದಳು. ಈ ವಿಚಾರದ ಬಗ್ಗೆ ನನಗೆ ಹಾಗೂ ಆಕೆಗೆ ಸರಿಹೋಗದ ಕಾರಣ ಸಂಬಂಧ ಬ್ರೇಕಪ್ ಆಯ್ತು ಎಂದು ಚಂದನ್ ಶೆಟ್ಟಿ ವಿವರಿಸಿದರು. ಇದನ್ನೂ ಓದಿ: ಬಿಗ್ ಬಾಸ್ ನ ಬಾರ್ಬಿ ಡಾಲ್ ಮದುವೆಯಾಗೋ ಹುಡುಗ ಹೀಗಿರಬೇಕಂತೆ!