ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್‌ ಶೆಟ್ಟಿ

Advertisements

ಬಿಗ್ ಬಾಸ್ ಮನೆಯ ಆಟ ಇದೀಗ ಐದನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿ ಸ್ಪರ್ಧಿ ಕೂಡ ಒಂದಲ್ಲಾ ಒಂದು ವಿಚಾರವಾಗಿ ಹೈಲೈಟ್ ಆಗುತ್ತಿದ್ದಾರೆ. ಸಾನ್ಯ ಕೂಡ ಓಟಿಟಿಯಂತೆ ಟಿವಿ ಬಿಗ್ ಬಾಸ್‌ನಲ್ಲೂ(Bigg Boss) ಆಕ್ಟೀವ್ ಆಗಿ ಆಡ್ತಿದ್ದಾರೆ. ನಾಲ್ಕನೇ ವಾರದ ಕ್ಯಾಪ್ಟನ್ ಆಗಿದ್ದ ಸಾನ್ಯ ಕ್ಯಾಪ್ಟೆನ್ಸಿಯ ವಿರುದ್ಧ ಇದೀಗ ಮನೆಮಂದಿ ತಿರುಗಿ ಬಿದ್ದಿದ್ದಾರೆ. ಸಾನ್ಯಳನ್ನ ರೂಪೇಶ್‌ ಶೆಟ್ಟಿ ಕೂಡ ಕಳಪೆ ಎಂದಿದ್ದಾರೆ.

Advertisements

ಓಟಿಟಿಯಿಂದ ಸೌಂಡ್ ಮಾಡುತ್ತಿದ್ದ ಸಾನ್ಯ ಅಯ್ಯರ್ ಟಿವಿ ಬಿಗ್ ಬಾಸ್‌ನಲ್ಲೂ ಸಖತ್ ಮೋಡಿ ಮಾಡಿದ್ದರು. ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ಸಾನ್ಯ ಆಯ್ಕೆಯಾದರು. ಸಾನ್ಯ ಕ್ಯಾಪ್ಟೆನ್ಸಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕ್ಯಾಪ್ಟೆನ್ಸಿಯ ವಾರದ ಸಾನ್ಯ ಆಟ ಗಮನದಲ್ಲಿಟ್ಟುಕೊಂಡು ಮನೆಯ ಮಂದಿ ಕಳಪೆ ಬೋರ್ಡ್ ಕೊಟ್ಟು, ಇದೀಗ ಜೈಲಿಗೆ ಕಳುಹಿಸಿದ್ದಾರೆ.

Advertisements

ಮನೆಯಲ್ಲಿ ಹಿರಿಯರಿಗೆ ಗೌರವ ಕೊಡದೇ ಸಾನ್ಯ ಮಾತನಾಡಿರುವುದು. ಕೆಲ ಟಾಸ್ಕ್ಅನ್ನು ಸಾನ್ಯ ಅರ್ಥ ಮಾಡಿಕೊಳ್ಳದೇ ಸ್ಪರ್ಧಿಗಳಿಗೆ ಮನೆಯಿಂದ ಕಳುಹಿಸಿದ ಗಿಫ್ಟ್ ಸಿಗದೇ ಇರುವುದು. ಹೀಗೆ ತಪ್ಪುಗಳ ಮೇಲೆ ತಪ್ಪನ್ನ ಮಾಡುತ್ತಲೇ ಬಂದರು ಸಾನ್ಯ. ಈಗ ಇದಕ್ಕೆಲ್ಲಾ ಬೆಲೆ ತರಬೇಕಾದ ಪರಿಸ್ಥಿತಿ ಸಾನ್ಯಗೆ ವದಗಿ ಬಂದಿದೆ. ಸಾನ್ಯ ಕ್ಯಾಪ್ಟೆನ್ಸಿಗೆ ಇಡೀ ಮನೆಯೇ ಜೀರೋ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

Advertisements

ಅಷ್ಟೇ ಅಲ್ಲ, ಕಳೆದ ವಾರ ಸಾನ್ಯ ಆಟಕ್ಕೆ ಅತ್ಯುತ್ತಮ ಸ್ಪರ್ಧಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದೀಗ ಕ್ಯಾಪ್ಟೆನ್ಸಿ ವಿಚಾರಕ್ಕೆ ಕಳಪೆ ಹಣೆಪಟ್ಟಿ ಕೂಡ ಪಡೆದಿದ್ದಾರೆ. ರೂಪೇಶ್ ಶೆಟ್ಟಿ ಕೂಡ ಸಾನ್ಯಗೆ ಕಳಪೆ ಬೋರ್ಡ್ ಕೊಟ್ಟಿದ್ದಾರೆ. ಕ್ಯಾಪ್ಟನ್‌ ಆಗಿ ಸಾನ್ಯ ಎಡೆವಿದ್ದಾರೆ ಎಂದು ರೂಪೇಶ್‌ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ರೂಪೇಶ್‌ನ ಈ ನಡೆ ಮನೆಮಂದಿಗೆ ಅಚ್ಚರಿ ಮೂಡಿಸಿದೆ.

Live Tv

Advertisements
Exit mobile version